ಶಾಸಕ ಹೆಚ್.ಡಿ.ರೇವಣ್ಣ ಕ್ಷಮೆ ಯಾಚಿಸಲು ಒತ್ತಾಯ

ಮೈಸೂರು:ಏ:18: ಪರಿಶೀಲನಾ ಸಭೆಯಲ್ಲಿ ಶಾಸಕ ಹೆಚ್.ಡಿ. ರೇವಣ್ಣರವರ ಅವಾಚ್ಯ ನಿಂದನೆಗೆ ಕ್ಷಮೆಯಾಚಿಸಬೇಕೆಂದು ಕಾವೇರಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ತಿಪಟೂರು ಶೇಖರ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ದಿನಾಂಕ :16/04/2021 ರಂದು ಹಾಸನದ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹಾಗೂ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣನವರು ಕಾವೇರಿ ಗ್ರಾಮೀಣ ಬ್ಯಾಂಕ್ (ಪ್ರಗತಿ-ಕೃಷ್ಣ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡು ದಿನಾಂಕ 01/04/2019 ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕಾಗಿ ಕಾರ್ಯ ನಿರ್ವಹಿಸುತ್ತಿವೆ) ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಲ್ಕಾ ನನ್ಮಕ್ಕಳು, ಲೂಟಿಕೋರರೆಂದು ಅವ್ಯಾಚ್ಯ ಪದಗಳಿಂದ ನಿಂದಿಸಿ ಅಸಂಸ್ಕುತ ಹಾಗೂ ಅನಾಗರಿಕ ಪದಗಳನ್ನು ಬಳಸುವುದರ ಮೂಲಕ ಇಡೀ ಗ್ರಾಮೀಣ ಬ್ಯಾಂಕಿಂಗ್ ವಲಯಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ನಿಮಿತ್ತಾ,ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ಸಂಘಟನೆ (ಭಾರತೀಯ ಮಜ್ದೂರ್ ಸಂಘದ ಘಟಕ) ಮಾನ್ಯ ರೇವಣ್ನವರ ನಡೆ ಹಾಗೂ ವರ್ತನೆಯನ್ನು ಖಂಡಿಸುತ್ತಿದ್ದು, ಸದರಿಯವರು ಈ ಕೂಡಲೇ ನಮ್ಮಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಕ್ಷಮೆಯಾಚಿಸುವಂತೆ ಈ ಮೂಲಕ ಒತ್ತಾಯಿಸುತ್ತಿದೆ.
ಗ್ರಾಮೀಣ ಬ್ಯಾಂಕ್ ಗಳು ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಹಾಗೂ ಪ್ರವರ್ತಕ ಬ್ಯಾಂಕಿನ ಕಾರ್ಯವ್ಯಾಪ್ತಿ ಹಾಗೂ ಆಡಳಿತಾತ್ಮಕ ಚೌಕಟ್ಟಿಗೆ ಒಳಪಟ್ಟಿದ್ದು, ಕಾಲ ಕಾಲಕ್ಕೆ ರಿಸವ್9 ಬ್ಯಾಂಕ್ ಆಫ್ ಇಂಡಿಯಾ ನೀಡಲಿರುವ ನೀತಿ-ನಿಯಮಗಳ ಹಾಗೂ ಸೂಚನೆಗಳಡಿಯಲ್ಲಿ ಸೇವೆ ಸಲ್ಲಿಸುತ್ತಿವೆ.ಇಂದು ನಮ್ಮ ಗ್ರಾಮೀಣ ಬ್ಯಾಂಕ್ ಗಳು ಕೇವಲ ಬ್ಯಾಂಕಿಂಗ್ ಸೇವೆಗಷ್ಟೇ ಮೀಸಲಾಗಿರದೆ ಸಾಮಾಜಿಕ ಯೋಜನೆಗಳಾದ ವೃದ್ಯಾಪ್ಯರಿಗೆ ಮಾಸಿಕ ವೇತನ ವಿತರಿಸುವುದು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ವಿತರಿಸುವುದು,ರಾಜ್ಯ ಸರ್ಕಾರ ನೀಡಬಹುದಾದ ಹಾಲಿನ ಸಬ್ಸಿಡಿ ವಿತರಿಸುವುದು, ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಯೋಜನೆಯಡಿ ದಿನಗೂಲಿ ವಿತರಿಸುವುದು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಮುಂಚೂಣಿ ಯಲ್ಲಿದ್ದು ಜನಪ್ರಿಯತೆಯನ್ನು ಪಡೆದಿವೆ. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದಾಗ್ಯೂ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ರೈತರಿಗೆ ಪ್ರಾಮಾಣಿಕ ಸೇವೆ ನೀಡಲು ಶ್ರಮಿಸುತ್ತಿವೆ.
ಕರೋನ ದಂತಹ ಮಹಾಮಾರಿಯ ಯುಗದಲ್ಲೂ ಜೀವದ ಹಂಗು ತೊರೆದು ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯ ಸೇವೆಯನ್ನು ಕೇಂದ್ರ ಸರ್ಕಾರವೇ ಶ್ಲಾಘಿಸಿ, ಪ್ರಶಂಸಿಸಿದೆ. ಹಾಗೂ ಬಿ.ಸಿ (ಃUSIಓಇSS ಅಔಖಖಇSPಔಓಆಇಓಖಿS) ಗಳ ಮೂಲಕ ಮನೆ ಬಾಗಿಲಿಗೆ ಸೇವೆ ವಿಸ್ತರಿಸುವಲ್ಲಿಯೂ ಕೂಡ ನಮ್ಮ ಗ್ರಾಮೀಣ ಬ್ಯಾಂಕುಗಳು ಯಶಸ್ವಿಯಾಗಿವೆ. ಹೀಗಿರುವಾಗ ಒಬ್ಬ ಜನಪ್ರತಿನಿಧಿಯಾಗಿ ಗ್ರಾಮೀಣ ಬ್ಯಾಂಕ್ ಗಳ ಸೇವೆಯನ್ನು ಪ್ರಶಂಸಿಸಬೇಕಾದ ಮಾನ್ಯ ಶಾಸಕರು ಗ್ರಾಮೀಣ ಬ್ಯಾಂಕ್ ಗಳ ಸೇವೆಯ ಬಗ್ಗೆ ಅರಿವಿಲ್ಲದೆ, ಈಗಾಗಲೇ ಸಾಲ ಪಡೆದು ಸುಸ್ತಿ ಯಾಗಿರುವ ಸಾಲಗಾರರಿಗೆ ಹಾಗೂ ಅನರ್ಹ ಅಭ್ಯರ್ಥಿಗಳಿಗೆ ಸಾಲ ನೀಡುವಂತೆ ಒತ್ತಡ ಹೇರುವುದರ ಮೂಲಕ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಕಾನೂನು ಬಾಹಿರ. ಅವರ ಅಸಂಬದ್ಧ ಹಾಗೂ ತಪ್ಪು ಹೇಳಿಕೆಯಿಂದಾಗಿ ಇಡೀ ನಮ್ಮಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮನನೊಂದಿದೆ.
ಇದರ ದುಷ್ಪರಿಣಾಮವಾಗಿ ಗ್ರಾಮೀಣ ಭಾಗದ ಜನರಿಗೆ ನಮ್ಮ ಶಾಖೆಗಳಿಂದ ಸಿಗುತ್ತಿರುವ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು. ಇದಕ್ಕೇ ಕಾರಣೀಭೂತರಾದ ರೇವಣ್ಣನವರ ವಿರುದ್ಧ ಸಾರ್ವಜನಿಕರೇ ರೊಚ್ಚಿಗೇಳುವ ಸಾದ್ಯತೆ ಕೂಡ ಇದ್ದು, ಕೂಡಲೇ ತಮ್ಮ ತಪ್ಪು ಹೇಳಿಕೆಯನ್ನು ಹಿಂದೆ ಪಡೆದು ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಬೇಕೆಂದು ಈ ಮೂಲಕ ಒತ್ತಾಯ ಮಾಡ ಬಯಸುತ್ತೇವೆ.
ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರುಗಳಾದ ಬಿ.ಆರ್. ಗಂಗಾಧರ್, ಸುಂದರ್, ಪ್ರಸಾದ್. ಎ.ಪಿ ಉಪಸ್ಥಿತರಿದ್ದರು.