ಶಾಸಕ ಹರೀಶ್ ಗೌಡ ರವರಿಂದ ಗುದ್ದಲಿ ಪೂಜೆ

ಸಂಜೆವಾಣಿ ವಾರ್ತೆ
ಮೈಸೂರು, ಡಿ.04-ಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡ ರವರು ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ವಾರ್ಡ್ ನಂ. 23ರ “ದಿವಾನ್ಸ್ ರಸ್ತೆಯ ಅಗಸಕೇರಿ ಅಡ್ಡ ರಸ್ತೆಯಿಂದ ಲೋಕಾಯುಕ್ತ ಕಚೇರಿಯವರೆಗೆ ಒಳಚರಂಡಿ ಅಳವಡಿಸುವ ಕಾಮಗಾರಿ”, ‘ಅಂದಾಜು ವೆಚ್ಚ ರೂ. 25.00 ಲಕ್ಷ’ ಗಳ ಕಾಮಗಾರಿಗೆ ಚಾಲನೆ ನೀಡಲು ಗುದ್ದಲಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ವಾರ್ಡಿನ ಅಧ್ಯಕ್ಷರಾದ ಆನಂದ್ ಮಾಜಿ ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಮಾಜಿ ಮೂಡ ಸದಸ್ಯರಾದ ನವೀನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ರಾಜೀವ್, ದೇವರಾಜ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್, ರಾಮರಾಜ್, ಜ್ಞಾನೇಶ್ , ಮಾದೇವಣ್ಣ ವೆಂಕಟೇಶ,ಕುಮಾರ್, ಗುತ್ತಿಗೆದಾರರಾದ ಶಿವರಾಜು, ಕಾಂಗ್ರೆಸ್ ಮುಖಂಡರು ಪವನ್ ಲೋಕೇಶ್, ಶ್ರೀಕಾಂತ್ ಪಾಪು ಪ್ರಶಾಂತ್,ರಾಜು ,ರವಿಚಂದ್ರ, ಮಂಜುಳಾ, ಶಾಂತಿ, ಮಂಗಳ, ಲೀಲಾವತಿ ಸಂದೀಪ್, ಕಾಂತಿಲಾಲ್ ,ನೌಕರ ಪ್ರವೀಣ್ ,ಹರೀಶ್ ಗೌಡ, ನಾಗೇಶ್ ಮಂಜಣ್ಣ, ನಂಜುಂಡಿ ಬಸವರಾಜಣ್ಣ, ಜಗದೀಶ್ ರಾಹುಲ್, ಹರ್ಷ ,ನವೀನ್
ಅಧಿಕಾರಿಗಳಾದ ಮುಸ್ತಫ ಜಗದೀಶ್ ,ನಾಗರಾಜ್, ಉಪಸ್ಥಿತರಿದ್ದರು