ಶಾಸಕ ಸುಭಾಷ್ ಗುತ್ತೇದಾರ 70ನೆಯ ಹುಟ್ಟುಹಬ್ಬ ಪಡಸಾವಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ

ಆಳಂದ;ಮೇ.29: ತಾಲೂಕಿನ ಪಡಸಾವಳಿ ಗ್ರಾಮಪಂಚಾಯತ್ ಕಾರ್ಯಲಯದಲ್ಲಿ ಮಾನ್ಯ ಶಾಸಕರಾದ ಸುಭಾಷ್ ಗುತ್ತೇದಾರ 70ನೆಯ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಹಾಗೂ ಗ್ರಾಮದ ಎಲ್ಲಾ ಬಡಾವಣೆಗಳಲ್ಲಿ ಸ್ಯಾನಿಟೈಸರ್ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಪ್ರಕಾಶ್ ಬೆಳಂ ಅವರಿಂದ ಚಾಲನೆ ನೀಡಿ ಮಾತನಾಡಿ ಕೊರೊನಾ ಹೆಚ್ಚಾಗಿದ್ದು ಇದಕ್ಕೆ ಅನೇಕೆ ಜನರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಪ್ರತಿಯೊಬ್ಬರು ಕೂಡಾ ಸರಕಾರದ ನಿಯಮ ಪಾಳನೆ ಮಾಡಿ ಕಡ್ಡಾಯವಾಗಿ ಎಲ್ಲರು ಮಾಸ್ಕ ಧರಿಸಬೇಕು ಎಂದರು.ಉಪಾಧ್ಯಕ್ಷರಾದ ಶರಣಬಸಪ್ಪ ಗ್ರಾಮ ಪಂಚಾಯತ್ ಸದಸ್ಯರ ಹೊನ್ನಪ್ಪ ಜಮಾದಾರ್ ಪ್ರಕಾಶ್ ಮನೆ ಭಾಗ್ಯಶ್ರೀ ಜಮಾದಾರ್ ಭಾಗ್ಯಶ್ರೀ ಸ್ವಾಮಿ ಹಾಗೂ ಗ್ರಾಮದ ಪ್ರಮುಖರಾದ ಶಿವಕಿರಣ ಪಾಟೀಲ್ ಮಹೇಶ್ ಮುನ್ನಳ್ಳಿ ರೋಹಿತರ ಗ್ರಾಮಸ್ಥರು ಭಾಗವಹಿಸಿದ್ದರು