ಶಾಸಕ ಸುಭಾಷ್ ಗುತ್ತೇದಾರರಿಂದ ಝಿರಾಕ್ಸ್ ಯಂತ್ರ ವಿತರಣೆ

ಆಳಂದ:ಮಾ.2:ವಿಕಲಚೇತನರು ಸಮಾಜದಲ್ಲಿ ಸ್ವಾವಲಂಬನೆಯಿಂದ ಜೀವನ ಸಾಗಿಸಲು ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ ಅರ್ಹ ವಿಕಲಚೇತನರು ಆ ಯೋಜನೆಗಳ ಲಾಭ ಪಡೆಯಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಬುಧುವಾರ ಆಳಂದ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ 8ಜನ ವಿಕಲಚೇತನ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಜರಾಕ್ಸ್ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಫಲಾನುಭವಿಗಳಾದ ಶರಣಬಸಪ್ಪ ವಗ್ಗಾಲೆ, ಶ್ರೀಶೈಲ ಸಿದ್ಧಾರೂಢ ಗುಳಗಿ ಸಚಿನ ಶಿವಾನಂದ ಬಿರಾದಾರ, ಶ್ರೀಶೈಲ ಪಾಟೀಲ, ಪುತಳಾಬಾಯಿ ಗಡಬಳ್ಳಿ, ಜೈಕುಮಾರ ರಾಮಚಂದ್ರ, ಪುμÁ್ಪವತಿ ನಗರೆÉ ಇವರುಗಳಿಗೆ ಶಾಸಕರಾದ ಸುಭಾಷ ಆರ್ ಗುತ್ತೇದಾರ ಅವರು ಜರಾಕ್ಸ್ ಯಂತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ವಿಠ್ಠಲರಾವ ಪಾಟೀಲ, ಹಿರಿಯ ಮುಖಂಎರಾದ ಮಲ್ಲಣ್ಣ ನಾಗೂರೆ, ಮಲ್ಲಿಕಾರ್ಜುನ ಕಂದಗೂಳೆ, ಹಣಮಂತ ಕಾಬಡೆ, ದಿಲೀಪ್, ಸಿದ್ದು ತೊಳನೂರ, ದತ್ತಾ ಪಾಟೀಲ, ಲಿಂಗರಾಜ ಉಡಗಿ, ಈರಣ್ಣ ಹತ್ತರಕಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.