ಚಾಮರಾಜನಗರ: ಮೇ.28:- ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಒತ್ತಾಯಿಸಿ ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿ, ಅಕ್ರೋಶ ವ್ಯಕ್ತಪಡಿಸಿದರು.ಸೋಲಿಲ್ಲದ ಸರದಾರರು, ಶಾಸಕರಾದ ಸಿ.ಪುಟ್ಟರಂಗಶೆಟ್ಟರಿಗೆ ಕಾಂಗ್ರೆಸ್ ವರಿಷ್ಟರು ಸಚಿವ ಸ್ಥಾನ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ಒಂದು ಹೈವೋಲ್ಟೆಜ್ ಕ್ಷೇತ್ರವಾಗಿದ್ದು ರಾಜ್ಯದ ಗಮನ ಸೆಳೆದಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಜ್ಯ ಮಟ್ಟದ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿಯಾದಂತಹ ವಿ.ಸೋಮಣ್ಣ ಅವರು ವಿರುದ್ದ ನಾಲ್ಕನೆಯ ಬಾರಿಯೂ ಪ್ರಚಂಡ ಗೆಲುವು ಸಾಧಿಸಿರುವ ಬಡವರ ಬಂಧು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು.ಇಲ್ಲದಿದ್ದರೆ. ಮುಂದಿನ ದಿನಗಳಲ್ಲಿ ಚಾಮರಾಜನಗರ ಬಂದ್ ಕರೆ ನೀಡಲಾಗುವುದು ಎಂದು ಪ್ರತಿಭಟನಾನಿತರು ಎಚ್ಚರಿಸಿದರು
ಶಾಸಕರಾದ ಸಿ.ಪುಟ್ಟರಂಗಶೆಟ್ಟರು ಈ ಬಾರಿ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯದಲ್ಲೇ ಉಪ್ಪಾರ ಸಮುದಾಯ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಬರಲು ಕಾರಣವಾಗಿದೆ. ಇದನ್ನು ಕಾಂಗ್ರೆಸ್ ವರಿಷ್ಟರು ಮನಗಂಡು ಪುಟ್ಟರಂಗಶೆಟ್ಟರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತು. ಆದರೆ ಸಮುದಾಯದ ಏಕೈಕ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ನೀಡದೆ ಡೆಪ್ಯೂಟಿ ಸ್ವೀಕರ್ ಸ್ಥಾನ ನೀಡಿರುವುದು ಸರಿಯಲ್ಲ. ಅವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದರೆ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಪ್ರತಿಭಟನಾನಿತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಕಾವೇರಿ ಶಿವಕುಮಾರ್, ರಮೇಶ್, ನಗರಸಭಾ ಸದಸ್ಯ ಬಸವಣ್ಣ, ಮಾಜಿ ಸದಸ್ಯ ಕೆಂಪರಾಜು, ಮುಖಂಡರಾದ ಮಂಗಲ ಶಿವಣ್ಣ, ಕೆ.ಟಿ.ನಾಗಶೆಟ್ಟಿ, ಕೋಡಿಮೋಳೆ ಗೋವಿಂದಶೆಟ್ಟಿ, ಪೈನಾಪಲ್ ಮಂಜು, ಮಹದೇವಸ್ವಾಮಿ, ಜಿಲ್ಲಾ ಉಪ್ಪಾರ ಯುವಕ ಸಂಘದ ಅಧ್ಯಕ್ಷ ಜಯಕುಮಾರ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಬೂದಿತಿಟ್ಟು ಲಿಂಗರಾಜು, ಸ್ವಾಮಿ, ಭಾಗವಹಿಸಿದ್ದರು.
ಮಹೇಶ್ ಕುದೇರು, ಕಾಗಲವಾಡಿ ಚಂದ್ರು, ಮಹದೇವಶೆಟ್ಟಿ, ಸುರೇಶ್ ವಾಜಪೇಯಿ, ನಂಜುಂಡಸ್ವಾಮಿ, ರಮೇಶ್, ಉಪ್ಪಾರ ಸಮುದಾಯದ ಯಜಮಾನರುಗಳು ಹಾಗೂ ಪುಟ್ಟರಂಗಶೆಟ್ಟರ ಅಭಿಮಾನಗಳು ಭಾಗವಹಿಸಿದ್ದರು.