ಶಾಸಕ ಶಿವರಾಜ ಪಾಟೀಲ್‌ರಿಗೆ ಜಿಲ್ಲಾಧ್ಯಕ್ಷ ಪಟ್ಟ ಬಾಬುರಾವ್ ಅಭಿನಂದನೆ

ರಾಯಚೂರು.ಜ.೧೭- ಭಾರತೀಯ ಜನತಾ ಪಕ್ಷದ ರಾಯಚೂರುಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಾಸಕ ಶಿವರಾಜ ಪಾಟೀಲ್ ನೇಮಕ ಹಿನ್ನಲೆ ರೈಲ್ವೆ ಬೋರ್ಡ್ ಸದಸ್ಯ ಡಾ.ಬಾಬುರಾವ್ ಅವರು ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ಮತ್ತು ಪಕ್ಷವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಶಾಸಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ರಾಜ್ಯದ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಆಂತರಿಕ ವಲಯ ಚರ್ಚೆಸಿ ಶಾಸಕರನ್ನು ನೇಮಕ ಮಾಡಿರುವುದು ಸ್ವಾಗತ.
ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿದ ಶಾಸಕ ಶಿವರಾಜ ಪಾಟೀಲ್ ಅವರ ನೇತೃತ್ವದಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳಲಾಗಿದೆ. ಶಾಸಕ ಶಿವರಾಜ ಪಾಟೀಲ್ ಅವರು ಪಕ್ಷ ನಿಷ್ಠೆ ಮೂಲಕ ಪ್ರಾಮಾಣಿಕ ಜಿಲ್ಲಾಧ್ಯಕ್ಷ ಸ್ಥಾನ ನಿಭಾಯಿಸಲಿದ್ದಾರೆ. ಶಾಸಕರ ನೇತೃತ್ವದಲ್ಲಿ ಮುಂಬರುವ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.
ಈ ಸಂದರ್ಭದಲ್ಲಿ ಬಸವರಾಜ, ತಿಮ್ಮಣ್ಣ ಗೌಡ, ಬಾಜಿ ಸೇರಿದಂತೆ ಉಪಸ್ಥಿತರಿದ್ದರು.