ಶಾಸಕ ಶಿವನಗೌಡ ಸೇರಿ ಹಲವರಿಂದ ನನ್ನ ಸೋಲು. ಪ್ರತಾಪ ಪಾಟೀಲ

ಸಿಂಧನೂರ ನ ೩ ನಾನು ಶಾಸಕನಾಗಿದ್ದಾಗ ಹೆಚ್ಚಿನ ಪ್ರಮಾಣದ ಅನುದಾನ ತಂದು ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಷು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಮತದಾರರು ಯಾಕೆ ನನ್ನನು ಸೋಲಿಸಿದರು ನನಗೆ ತಿಳಿಯದಾಗಿದೆ ನನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದನೆ ಎಂದು ಬಿಜೆಪಿಯ ಮಸ್ಕಿಮಾಜಿ ಶಾಸಕ ಫ್ರತಾಪ ಗೌಡ ಪಾಟೀಲ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಗೆಲುವಿಗೆ ಎಲ್ಲರು ಶ್ರಮಿಸಿದರು ಆದರೆ ದೇವದುರ್ಗ ಶಾಸಕ ಶಿವನಗೌಡ ನಾಯಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಬಗ್ಗೆ ನನ್ನ ಕ್ಷೇತ್ರದಲ್ಲಿ ಕಾರ್ಡಗಳನ್ನು ಹಂಚಿ ಗೊಂದಲ ಸೃಷ್ಟಿಸುವ ಅವಶ್ಯಕತೆ ಏನು ಇತ್ತು ನಾನು ಗೆದ್ದರೆ ಮಂತ್ರಿ ಯಾಗುತ್ತನೆ ಎಂಬ ಕಾರಣದಿಂದ ಅವರು ಸೇರಿದಂತೆ ಕೆಲವರು ನನ್ನ ಸೋಲಿಗೆ ಕಾರಣರಾದರು ಎಂದರು
ವಾಲ್ಮೀಕಿ ನಾಯಕ ಸಮಾಜ ಕ್ಕೆ ಮೀಸಲಾತಿ ಬೇಕು ಎಂದು ಸಮಾಜದಿಂದ ಸುಮಾರು ವರ್ಷಗಳಿಂದ ಹೋರಾಟ ಮಾಡಿದರು ಕಾಂಗ್ರೆಸ್ಸ ಪಕ್ಷದ ಹಾಗೂ ಸರ್ಕಾರ ಮೀಸಲಾತಿ ನೀಡದೆ ನಮಗೆ ಅನ್ಯಾಯ ಮಾಡಿದೆ ಆದರೆ ಬಿಜೆಪಿಯ ಸರ್ಕಾರ ಮೀಸಲಾತಿ ನೀಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡು ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಸಮಾವೇಶ ಮಾಡಲಾಗುತ್ತದೆ ಎಂದು ತಿಳಿಸಿದರು
ಶಾಸಕ ಬಸನಗೌಡ ತುರ್ವಿಹಾಳ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳನ್ನು ಮಾಡಿಸುವ ಮೂಲಕ ಹಣ ಲೂಟಿ ಮಾಡುತ್ತಿದ್ದು ಇದರ ಬಗ್ಗೆ ಗಮನ ಹರಿಸಿ ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆ ಅದಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಲ್ಲದೆ ದೂರ ಸಹ ನೀಡಿದ್ದೇನೆ ಶಾಸಕರ ವರ್ತನೆಯಿಂದ ಜನ ಬೇಸತ್ತ ಹೋಗಿದ್ದಾರೆ ಎಂದರು
ಇಡಿ ಸರ್ಕಾರ ಬಂದು ಸಾಕಷ್ಷ ಹಣ ಖರ್ಚ ಮಾಡಿದರು ಸಹ ನೀವು ಗೆಲ್ಲಲಿಲ್ಲ ಯಾಕೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಅದೆ ನನಗೆ ಎಡವಟ್ಟು ವಾಗಿದೆ ಎಂಬ ಅನುಭವ ಬರತೊಡಗಿದೆ ಕ್ಷೇತ್ರದ ಮತದಾರರು ನನ್ನ ಬಗ್ಗೆ ಒಲವು ಪ್ರೀತಿ ಇತ್ತು ಆದರೆ ಹೊರಗಿನ ಜನ ಬಂಧು ಚುನಾವಣೆ ಪ್ರಚಾರ ಮಾಡಿದ ಕಾರಣ ಹಾಗೂ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣ ವಾಗಿ ನಾನು ಸೋತಿದ್ದೆನೆ ಈಗ ಅದರ ಬಗ್ಗೆ ಅರಿವು ವಾಗಿದ್ದು ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಥಳೀಯ ಮುಖಂಡರು ಕಾರ್ಯಕರ್ತರ ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಪ್ರಚಾರ ಕಾರ್ಯಕ್ರಮಗಳನ್ನು ಮಾಡುತ್ತೆನೆ ಎಂದರು
ನಾನು ಮುರು ಸಲ ಶಾಸಕರಾಗಿದ್ದು ಕ್ಷೇತ್ರದ ಮತದಾರರಿಗೆ ನಾನು ಬೇಡವಾಗಿ ಹೊಸ ಮುಖ ನೋಡಲು ಜನ ಆಶೆಪಟ್ಟಿದ್ದರು ಎನಿಸುತ್ತಿದೆ ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ಜನ ಬದಲಾವಣೆಯ ನ್ನು ಬಯಸಿದ್ದಾರೆ ಶಾಸಕ ಬಸನಗೌಡ ತುರ್ವಿಹಾಳ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೆ ಇರುವುದರಿಂದ ಶಾಸಕರು ಜನರಿಗೆ ಬೇಸರವಾಗಿದ್ದಾರೆ ಜನ ಬಯಸಿದಂತೆ ಮುಂದಿನ ಮಸ್ಕಿ ವಿಧಾನ ಸಭೆಯ ಚುನಾವಣೆಯಲ್ಲಿ ನಾನು ಗೆಲ್ಲುವುದು ಶತ ಸಿದ್ದ ಶಾಸಕ ಬಸನಗೌಡ ಮನೆಗೆ ಹೊಗುವದು ಗ್ಯಾರಂಟಿ ಎಂದರು
ಬಿಜೆಪಿಯ ಮುಖಂಡರಾದ ಶಿವನಗೌಡ ಗೋರೆಬಾಳ ಬಸವಂತರಾಯ ಕುರಿ ಶರಣಬಸವ ವಕೀಲರು ಉಮಲೂಟಿ ಶರಣೆಗೌಡ ಮಸ್ಕಿ ಸಿದ್ಧೇಶ್ವರ ಶಿವಪುತ್ರಪ್ಪ ಸೇರಿದಂತೆ ಇತರರು ಇದ್ದರು