ಶಾಸಕ ಶಿವನಗೌಡ ನಾಯಕ್, ಬಿವಿ ನಾಯಕ್ ಅಳಿಯಂದರ ವಿರುದ್ದ ಕ್ರಮಕ್ಕೆ ಒತ್ತಾಯ

ರಾಯಚೂರು,ಡಿ.೬- ಪರ್ತಪೂರ, ನಿಲವಂಜಿ, ಬಾಗೂರು, ಚಕ್ರಿ ಕುಂಟಿ ಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ್, ಬಿ.ವಿ.ನಾಯಕ್, ರಾಜಶೇಖರ ನಾಯಕ್, ಅಳಿಯಂದರು, ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಒತ್ತಾಯಿಸಿದರು.
ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದ ಸರ್ವೆ ನಂಬರ್ ೪೧, ೪೨, ೪೩, ೪೦, ೩೯, ಈ ಸರ್ವೇ ನಂಬರ್‌ಗಳಲ್ಲಿ ಟೆಂಡರ್ ಇಲ್ಲದೆ ಟ್ರ್ಯಾಕ್ಟರ್ ಗಳ ಮುಖಾಂತರ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನದಿಯಲ್ಲಿ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಪರ್ತೆಪೂರ ಸರ್ವೆ ನಂಬರ್ ೩/೨,೪,೮/೧ ಈ ಸರ್ವೇ ನಂಬರ್ ಗಳಲ್ಲಿ ಟೆಂಡರ್ ಇಲ್ಲದೆ ನೂರಾರು ಟ್ರ್ಯಾಕ್ಟರ್ ಗಳ ಮುಖಾಂತರ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ.ಮತ್ತು ಕರ್ಕಿಹಳ್ಳಿ ಜೋಳದ ಹೆಡಗಿ, ನಿಲುವಂಜಿ, ನಿಂಗದಳ್ಳಿ ಬಾಗುರು ೮ ಗ್ರಾಮದ ಎಲ್ಲಾ ಟ್ರ್ಯಾಕ್ಟರ್ ಸೆರೆ ಕೃಷ್ಣನ ದಿಲಿಟ್ ಎಂದರಲ್ಲದೆ ೭೦೦ಕ್ಕೂ ಹೆಚ್ಚು ಡಾಕ್ಟರ್ ಗಳ ಮೂಲಕ ಅಕ್ರಮ ಮರಳು ಗಣಿಗಾರಿಕೆ ಮಾಡಿ ಜಮೀನುಗಳಲ್ಲಿ ಮಾಡಿಲ್ಲದೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ದೂರಿದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು ಗುತ್ತಿಗೆದಾರರು, ಮತ್ತು ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆ ಅಧಿಕಾರಿಗಳು ,ಶಾಮೀಲಾಗಿದ್ದು ಕೂಡಲೇ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.