ಶಾಸಕ ಶಿವನಗೌಡ ನಾಯಕತ್ವದಿಂದ ಬೇಸತ್ತು ಜೆಡಿಎಸ್ ಸೇರ್ಪಡೆ – ತಮ್ಮಣ್ಣ

ರಾಯಚೂರು,ಮಾ.೨೩- ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರ ನಾಯಕತ್ವದಿಂದ ಬೇಸತ್ತು ೪೦೦ ಜನ ಬಿಜೆಪಿ ಕಾರ್ಯಕರ್ತರು ಮಾ.೨೪ ರಂದು ದೇವದುರ್ಗದ ಗಬ್ಬೂರು ಹೋಬಳಿಯ ಹೊನ್ನಟಗಿ ಗ್ರಾಮದಲ್ಲಿ ದೇವದುರ್ಗದ ತಾಲ್ಲೂಕಾಧ್ಯಕ್ಷ ಹಾಗೂ ದೇವದುರ್ಗದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ ಎಂದು ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ ತಮ್ಮಣ್ಣ ವಕೀಲ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ೨೦೦೮ರಿಂದ ಬಿಜೆಪಿ ಪಕ್ಷದಲ್ಲಿದ್ದು ಪಕ್ಷದ ಅನೇಕ ಕಾರ್ಯಚಟುವಟಿಕೆಗಳನ್ನು ಮಾಡಿದ್ದೇವೆ. ೧೬ ವರ್ಷಗಳಿಂದ ಶಾಸಕ ಶಿವನಗೌಡ ಅವರ ಜೊತೆಗೆ ಪಕ್ಷದ ಕೆಲಸ ಮಾಡಿದರೂ ಅವರ ನಾಯಕತ್ವದಲ್ಲಿ ಕ್ಷೇತ್ರದಲ್ಲಿ ರೈತರ, ಯುವಕರ ಹಾಗೂ ಜನಪರ ಕೆಲಸವಾಗಿಲ್ಲ. ಅತ್ಯಂತ ದೊಡ್ಡ ಹೋಬಳಿಯಾದ ಗಬ್ಬೂರನ್ನು ತಾಲ್ಲೂಕು ರಚನೆ ಮಾಡಲು ಎಲ್ಲಾ ಮಾನದಂಡ,ಅರ್ಹತೆಯಿದ್ದರೂ ಅರಕೆರ ಗ್ರಾಮವನ್ನು ತಾಲ್ಲೂಕು ಆಗಿ ರಚನೆ ಮಾಡಿದ್ದಾರೆ. ಹೀಗೆ ಅನೇಕ ಜನವಿರೋಧಿ ಕೆಲಸ ಮಾಡಿದ್ದರಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಹಸೆನ್ ಬಾಷ, ನಾಗರಾಜ ಹಿರೆಕೂಡ್ಲಗಿ, ಸುರೇಶ ಗೌಡ ಇದ್ದರು.