ಶಾಸಕ ಶಿವನಗೌಡನಾಯಕಗೆ ಕಂಡಲ್ಲಿ ಮುತ್ತಿಗೆ :ಕರೆಮ್ಮ ಜಿ.ನಾಯಕ

ದೇವದುರ್ಗ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಕೆ.ಶಿವನಗೌಡನಾಯಕ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಕಂಡ ಕಂಡಲ್ಲಿ ಅವರಿಗೆ ಮುತ್ತಿಗೆ ಹಾಕಲಾಗುವುದೆಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕರಾದ ಕರೆಮ್ಮ ಜಿ.ನಾಯಕ ಎಚ್ಚರಿಕೆ ನೀಡಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಲಿನ ಹತಾಶೆಯಿಂದ ಎರಾಬಿರಿ ಮಾತಾನುಡುವ ಚಾಳಿ ಶಾಸಕರು ರೂಢಿಸಿಕೊಂಡಿದ್ದಾರೆ. ಅನ್ನ ನೀಡಿದ ಮನೆಗೆ ಕಲ್ಲು ಹೊಡೆಯುವ ಮನೋಭಾವ ಕೆ.ಶಿವನಗೌಡನಾಯಕರಿಗೆ ಇದೆ. ಹುಚ್ಚು ಹುಚ್ಚು ಮಾತನಾಡಿರುವ ಕುರಿತು ಬಹಿರಂಗವಾಗಿ ಕ್ಷಮೆಯಾಚಿಸಬೇಕು.ಇಲ್ಲದಿದ್ದಲ್ಲಿ ಕಂಡಲ್ಲಿ ಶಾಸಕರಿಗೆ ಘೇರಾವ ಹಾಕಲಾಗುವದು.
ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ೨.೨೩ ಲಕ್ಷ ಮತದಾರರಿದ್ದು, ಸುಮಾರು ೭೦% ಮತದಾನವಾದರೂ ಈತನಿಗೆ ೧.೫ಲಕ್ಷ ಮತ ಪಡೆಯುತ್ತೇನೆ ಎಂಬುದು ಪರಿಜ್ಞಾನವಿಲ್ಲದೇ ಮಾತನಾಡುತ್ತಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿನಿ ಎನ್ನುವ ಶಾಸಕರು, ಭಾರಿ ಭ್ರಷ್ಟಾಚಾರ ಮಾಡಿರುವದು ಎಲ್ಲರಿಗೂ ಗೊತ್ತಿರುವ ಸಂಗತಿ. ನೀ ಮಾಡಿದ ಕರ್ಮಗಳಿಗೆ ದೇವರಿಗೆ ಯಾಕೆ ಹೊರೆ ಮಾಡುತ್ತೀರಿ. ನೀನು ದೇವರ ಮಗನಲ್ಲ, ಪಾಪಿ ಮಗ.
ಇಂತಹ ಶಾಸಕನಿಂದ ತಾಲೂಕಿನಲ್ಲಿ ರಾಜಕೀಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಯಾವ ಕಾಲಕ್ಕೂ ಇದ್ದಿಲ್ಲ.
ಭ್ರಷ್ಟಾಚಾರ ಮಾಡಿ ರಾಯಚೂರಿನಲ್ಲಿ ರಂಜಿತಾ ಪ್ಯಾಲೇಸ್, ಬೆಂಗಳೂರಲ್ಲಿ ಬೆಲೆ ಬಾಳುವ ಆಸ್ತಿ ಸೇರಿದಂತೆ ಸಾವಿರಾರು ಕೋಟಿ ಅಕ್ರಮವಾಗಿ ಗಳಿಸಿದ್ದು,ಹಣದ ಮದದಲ್ಲಿ ಮಾತನಾಡಿದರೆ ಕೋಣೆಯಲ್ಲಿ ಕಾರ್ಯಕರ್ತರು ಕೂಡಿ ಹಾಕುತ್ತಾರೆ. ಮಾತಿನಲ್ಲಿ ಎಚ್ಚರವಿರಲಿ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆತನದ ಕುರಿತು ಮಾತನಾಡುವ ಶಾಸಕರಿಗೆ ನೈತಿಕತೆ, ಯೋಗ್ಯತೆ ಇಲ್ಲಾ. ನೀರಾವರಿ ಸೌಲಭ್ಯ ನೀಡಿದ್ದಲ್ಲದೇ,ಶಾಸಕರಿಗೆ ರಾಜಕೀಯ ಜೀವದಾನ ಮಾಡಿರುವದು ಜೀವನ ಪರ್ಯಂತ ಮರೆಯಬಾರದು. ಆದರೆ ಅವರ ಕುರಿತು ಹಗುರವಾಗಿ ಮಾತನಾಡಿದರೆ ಕೆಟ್ಟಪರಿಣಾಮ ನಿರ್ಮಾಣವಾಗುತ್ತದೆ ಎಂಬ ಅರಿವು ಶಾಸಕ ಕೆ.ಶಿವನಗೌಡನಾಯಕ ಇರಬೇಕು. ಇಲ್ಲದಿದ್ದಲ್ಲಿ ಜೆಡಿಎಸ್ ಪಕ್ಷ, ಕಾರ್ಯಕರ್ತರು ಹಾಗೂ ತಾಲೂಕಿನ ಮತದಾರರು ಮರೆಯದ ಪಾಠ ಕಲಿಸುತ್ತಾರೆ.
ಕೂಡಲೇ ಶಾಸಕ ಕೆ.ಶಿವನಗೌಡನಾಯಕ ಮಾಧ್ಯಮ ಮತ್ತು ಜನ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಹೋರಾಟಗಳು ತೀವ್ರಗೊಳ್ಳಲಿವೆ ಎಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಮರೇಶ ಪಾಟೀಲ್ ಪರ್ತಪೂರ, ಸಿದ್ದನಗೌಡ ಮೂಡಲಗುಂಡ, ಶರಣಪ್ಪ ಬಳೆ, ಶಾಲಂ ಉದ್ದಾರ, ದಾವುದ್ ಔಂಟಿ, ಸಾಬಗೌಡ, ಬಸವರಾಜ ಅರಕೇರಾ, ಈಸಾಕ್ ಮೇಸ್ತ್ರಿ ಹಾಗೂ ಇತರರು ಇದ್ದರು.