ಶಾಸಕ ಲಕ್ಷ್ಮಣ ಸವದಿ ಅವರಿಂದ ವಿದ್ಯಾರ್ಥಿನಿಯರಿಗೆ ಸನ್ಮಾನ

ಅಥಣಿ :ಜೂ.25: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಸಮೃದ್ಧಿ ಭರಮಗೌಡ ಪಾಟೀಲ ಇವಳು 613 ಅಂಕಗಳನ್ನು ಪಡೆದು, ಶಂಕರಹಟ್ಟಿಯ ಎಸ್.ಎಸ್.ಎಲ್. ಸಿ . ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ, ಇನ್ನುಳಿದಂತೆ ಪಲ್ಲವಿ ಬಾಹುಬಲಿ ಬೊಮ್ಮಣ್ಣವರ 606 ಅಂಕ ಹಾಗೂ ಸಾದಿಯಾ ರಿಯಾಜಅಹ್ಮದ ನದಾಫ 588 ಅಂಕಗಳನ್ನ ಪಡೆದು ಪ್ರೌಢಶಾಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಗ್ರಾಮಕ್ಕೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರಿಗೆ ಶಾಸಕರಾದ ಲಕ್ಷ್ಮಣ ಸವದಿಯವರು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ, ರಾಜ್ಯ ಉಪಾಧ್ಯಕ್ಷ ಹಾಗೂ ಪ್ರೌಢಶಾಲೆಯ ಮುಖ್ಯಸ್ಥ ಡಿ.ಬಿ.ನದಾಫ ಹಾಗೂ ಸುರೇಶ ಸವದಿ, ಪರಮಾನಂದ ತೇಲಿ, ಇಸ್ಮಾಯಿಲ್ ಕರಿಸಾಬು, ರವಿ ಬೊಮ್ಮಣ್ಣವರ, ರಾಮು ಕುಂಬಾರ, ಚಂದ್ರಕಾಂತ ಸಂಕ್ರಟ್ಟಿ, ಅಶೋಕ ಐಗಳಿ, ಧರೇಪ್ಪಾ ಚುನಾರ, ಪಿ.ಬಿ. ಗುಡೊಡಗಿ, ಭರಮಗೌಡ ಪಾಟೀಲ, ಬಾಹುಬಲಿ ಬಮ್ಮಣ್ಣವರ, ರಿಯಾಜಅಹ್ಮದ ನದಾಫ, ಅಪ್ಪಾಸಾಬ ಕಾಂಬಳೆ, ಶಿಕ್ಷಕರಾದ ಮುಕುಂದ ತೀರ್ಥ, ಸುಲ್ತಾನ ಕೋರ್ಬು, ಶಿವಪುತ್ರ ಪಾಲಬಾಂವಿ, ಮಹಮ್ಮದ ನದಾಫ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.