
ವಿಜಯಪುರ:ಮೇ.18: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೇ ನಕಲಿ ಮತದಾನ ಮಾಡಿದ ಬಗ್ಗೆ ಸಾಕ್ಷಾಧಾರ ಸಮೇತ ಪತ್ತೆ ಹಚ್ಚಿದ್ದು ಸ್ವತಃ ಕಾಂಗ್ರೆಸ್ ಅಭ್ಯರ್ಥಿಯ ಹೆಸರೇ ಎರಡು ಕಡೆ ಮತದಾರ ಪಟ್ಟಿಯಲ್ಲಿದೆ ಎಂದು ಹೇಳಿಕೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಸುಳ್ಳು ಹಾಗೂ ಬಾಲಿಶತನದಿಂದ ಕೂಡಿದ್ದು ತಾವು ಮಾಡಿದ ಹುಳುಕು ಮುಚ್ಚಿಕೊಳ್ಳಲು ಈ ರೀತಿ ವರ್ತನೆ ಮಾಡುತ್ತಿದ್ದು ನಗರ ಮತಕ್ಷೇತ್ರದ ಮತದಾರರು ಇವರು ಎಷ್ಟು ಸತ್ಯವಂತರು ಎಂಬುದು ಅರಿತುಕೊಂಡಿರುತ್ತಾರೆ.
ಈ ಸಂಭಂದ ಹೇಳಿಕೆ ನೀಡಿರುವ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯು ಭಾಗ ಸಂಖ್ಯೆ : 172 ಮತ್ತು 173 ರಲ್ಲಿ ಮತದಾರರಾಗಿದ್ದಾರೆ ಎಂದು ಆರೋಪಿಸಿದ್ದು, ಈ ಹಿಂದೆ ಭಾಗಸಂಖ್ಯೆ – 175 ಇದ್ದಾಗ ದಿನಾಂಕ : 12-04-2018 ರಲ್ಲಿ ಅರ್ಜಿ ಸಲ್ಲಿಸಿರುತ್ತೇನೆ ಅದು ಮುಂದುವರೆದು ಭಾಗ ಸಂಖ್ಯೆ : 172 ಆಗಿರುತ್ತದೆ ಈ ಹಿಂದೆಯ ಭಾಗ ಸಂಖ್ಯೆ – 172 ರಲ್ಲಿರುವ ಹೆಸರು ರದ್ದುಗೊಳಿಸಲು ದಿನಾಂಕ : 16-03-2023 ರಂದು ಅರ್ಜಿಕೊಟ್ಟು ಭಾಗ ಸಂಖ್ಯೆ – 172 ರಲ್ಲಿಯ ಹೆಸರು ರದ್ದುಗೊಂಡಿರುತ್ತದೆ ಅನ್ನುವುದು ಕನಿಷ್ಠ ಮಟ್ಟದ ತಿಳುವಳಿಕೆಯು ಶಾಸಕರಿಗಿಲ್ಲಾ ಮೊನ್ನೆ ನಡೆದ ಚುನಾವಣೆಯಲ್ಲಿ ಅಧಿಕಾರಿಗಳಿಗೆ ತಮ್ಮ ಕೈಗೊಂಬೆಯಾಗಿ ತೆಗೆದುಕೊಂಡು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಸಕ್ಕರೆ ಕಾರ್ಖಾನೆ ಕೋಲ್ಡ ಸ್ಟೋರೇಜ ಹಾಗೂ ಸಿದ್ಧಸಿರಿ ಬ್ಯಾಂಕಿನ ಸಿಬ್ಬಂದಿಗಳ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಸರು ಅನೈತಿಕವಾಗಿ ಸೇರಿಸಿ ಅಕ್ರಮ ಮತದಾನದ ಮೂಲಕ ಗೆಲುವು ಸಾಧಿಸಿದ್ದು ನಾಚಿಕೇಗೇಡಿನ ಸಂಗತಿಯಾಗಿದ್ದು ಇದನ್ನೆಲ್ಲಾ ಮರೆಮಾಚಲು ಈ ರೀತಿ ಅಸಮಂಜಸ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಹತ್ತಿರ ಧಮ್ಮು ತಾಕತ್ತು ಇದ್ದರೆ ನ್ಯಾಯಾಂಗ ತನಿಖೆಗೆ ಆಗ್ರಹಿಸಲಿ ಆಗ ಸತ್ಯಾಸತ್ಯತೆ ಹೊರ ಬರುತ್ತದೆ. ನಗರ ಶಾಸಕರು ಚುನಾವಣೆ ದಿನದಂದು ತಮ್ಮ ಜೊತೆ 10 ಗಾಡಿಗಳಲ್ಲಿ ಗುಂಡಾಗಳನ್ನು ಜೊತೆಗಿಟ್ಟುಕೊಂಡು ಮತದಾರರಿಗೆ ಹೆದರಿಸುವ ಕೆಲಸ ಮಾಡಿದ್ದು, ಇಡೀ ವಿಜಯಪುರ ನಗರಕ್ಕೆ ಗೊತ್ತಿರುವ ಸಂಗತಿ ಬೇರೆಯವರ ಮೇಲೆ ಆರೋಪ ಮಾಡುವ ಮುಂಚೆ ಶಾಸಕರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಇಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಬಿಟ್ಟು ನ್ಯಾಯಾಂಗ ತನಿಖೆಗೆ ಆಗ್ರಹಿಸಲಿ ಆಗ ಶಾಸಕರ ಘನತೆಗೆ ಗೌರವ ಬರುತ್ತದೆ.