ಶಾಸಕ ಯತ್ನಾಳ ಅವರಿಂದ ಜನ ಸಂಪರ್ಕ ಸಭೆ

ವಿಜಯಪುರ, ನ.17- ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ಜನ ಸಂಪರ್ಕ ಸಭೆಯನ್ನು ಲಕ್ಷ್ಮೀನಗರ ವಾರ್ಡ್ ನಂ. 21 ಬನ್ನಿ ಮಹಾಂಕಾಳಿ ಕಟ್ಟೆಯ ಹತ್ತಿರ ಸಭೆ ಜರಗಿತು.
ಬಾಗಲಕೋಟ ಬಸವನ ಬಾಗೇವಾಡಿ ರೀಂಗ್ ರಸ್ತೆಗೆ ಇರುವ ಲಕ್ಷ್ಮೀನಗರ ವಾರ್ಡ್ ನಂ. 21 ರಲ್ಲಿ 15-11-2021ರಂದು ಬನ್ನಿ ಮಹಾಂಕಾಳಿ ದೇವಿ ಕಟ್ಟಿಯ ಹತ್ತಿರ ಸಾರ್ವಜನಿಕರ ಸಮಸ್ಯೆಗಜಳ ಬಗ್ಗೆ ನಗರದ ಜನಪ್ರೀಯ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ಹಾಗೂ ಶ್ರೀಹರಿ ಗೊಳಸಂಗಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯಪುರ ಇವರಿಗೆ ಮನವಿ ಮೂಲಕ ಮಾತನಾಡಿದರು.
ವೀರಶೈವ ಲಿಂಗಾಯತ ಜಿಲ್ಲಾ ಸೌಹಾರ್ದದ ಉಪಾಧ್ಯಕ್ಷರಾದ ಚನ್ನಬಸಯ್ಯ ಸಿ. ಹಿರೇಮಠ ಲಕ್ಷ್ಮೀ ನಗರದ ನಿವಾಸಿಯಾದ ಇವರು ಮಾತನಾಡಿ, ಕಳೆದ 20 ವರ್ಷಗಳಿಂದ 945/946ರಲ್ಲಿ ಮನೆಗಳು ನಿರ್ಮಾಣ ಮಾಡಿಕೊಂಡು ಸುಮಾರು 1500ರಿಂದ 2000 ಮನೆಗಳು ಎನ್.ಎ. ಜಮೀನಿನಲ್ಲಿ ಕಟ್ಟಿಕೊಂಡಿದ್ದು, ನಿವೇಶನ ಮಾರಾಟ ಮಾಡಿದವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ಮಾರಾಟ ಮಾಡಿ ಹೋಗಿರುತ್ತಾರೆ.
ಮನೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಪೂರ್ಣವಾಗಿ ಸರ್ವೆ ಮಾಡಿಸಿ ಪ್ರತಿಯೊಂದು ಮನೆಗಳ ನಕ್ಷಯನ್ನು ತಯಾರಿಸಿದ ನಂತರ ಪ್ರಾಧಿಕಾರದಿಂದ ಅನುಮೊದನೆ ಮಾಡಿಸಿ ಕೊಡಬೇಕೆಂದು ಶಾಸಕರಾದ ಬಸನಗೌಡ ರಾ. ಪಾಟೀಲ ಯತ್ನಾಳ ಅವರಿಗೆ ಮನವಿ ಮಾಡಿದರು. ಮನವಿಯನ್ನು ಸ್ವೀಕರಿಸಿದ ಶಾಸಕರು ಸ್ಥಳದಲ್ಲಿಯೇ ಇದ್ದ ನಗರಾಭಿವೃದ್ಧ ಪ್ರಾಧಿಕಾರದ ಅಧ್ಯಕ್ಷ ಶ್ರೀ ಹರಿ ಗೊಳಸಂಗಿಯವರಿಗೆ ಹೇಳಿದರು.
ಆಯುಕ್ತರಿಗೆ ದೂರವಾಣಿ ಮುಖಾಂತರ ಮಾತನಾಡಿ ಶಾಸಕರು ಈ ಕೆಲಸವನ್ನು ತೀವ್ರಗತಿಯಲ್ಲಿ ಮಾಡಿಸಿಕೊಡುವುದಾಗಿ ಹೇಳಿದರು. ನಂತರ ಶಾಸಕರು ಲಕ್ಷ್ಮೀನಗರ ವಾರ್ಡ್ ನಂ. 21ರಲ್ಲಿ ಪ್ರತಿಯೊಂದು ಬೀದಿ ಬೀದಿಗಳಲ್ಲಿ ತಿರುಗಾಡಿ ಸಿ.ಸಿ. ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಯಾವುದೇ ಕಾಮಗಾರಿ ಕೆಲಸ ಆಗಬೇಕಾದರೆ ಅದನ್ನು ಸಾರ್ವಜನಿಕರ ಮನವಿ ಸ್ವೀಕರಿಸಿ ಯಾವುದೇ ತರದ ತೊಂದರೆ ಇದ್ದರು ಸಮಸ್ಯೆಗಳ ಬಗ್ಗೆ ತೀರ್ವಾವಾಗಿ ಬಗೆ ಹರಿಸುವುದಾಗಿ ಹೇಳಿದರು. ಮತ್ತು ಇನ್ನುಳಿದ ಕಾಮಗಾರಿಗಳ ವಿಷಯವನ್ನು ಮಂಜೂರಾದ ಕಾಮಗಾರಿಗಳು ಹಾಗೂ ಮುಂದೆ ಜನೇವರಿ ತಿಂಗಳಲ್ಲಿ ಕಾಮಗಾರಿ ಆಗಬೇಕಾದ ಬಗ್ಗೆ ತಿಳಿಸಿಹೇಳಿದರು. ಇನ್ನೀತರ ಕೆಲಸ ಇದ್ದರೆ ಮಾಡಿಸಿಕೊಡುತ್ತೇನೆಂದು ಜನರಲ್ಲಿ ಮನವರಿಕೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರೇಮಾನಂದ ಬಿರಾದಾರ, ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಸಂತೋಷ ಕುಮಾರ ತಳಕೇರಿ, ಪ್ರವೀಣ, ಅರ್ಜುನ ಸಾರವಾಡ, ಬಿ.ಎಸ್. ನವಲಿ, ಜಿ.ಎಸ್. ಬಳ್ಳೂರ, ಆನಂದ ಬಸರಕೋಡ, ರಮೇಶ ಸಿದ್ರಾಮಪ್ಪಾ ಬಿರಾದಾರ ಗುತ್ತಿಗೆದಾರರು ಮುಂತಾದವರು ಇದ್ದರು.