ಶಾಸಕ ಭೀಮಾ ನಾಯ್ಕ್  ವಿರುದ್ಧ ಕರವೇ ಒಕ್ಕೂಟದಿಂದ ಪ್ರತಿಭಟನೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.26 ಟಿವಿ ಚಾನೆಲ್ ನಲ್ಲಿ ಬಿತ್ತ ಗೊಂಡ ಶಾಸಕ ಭೀಮಾ ನಾಯ್ಕ್  ಕಮಿಷನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಘಟನೆಗಳ ವಿರುದ್ಧ ಹಗುರವಾಗಿ ಮಾತನಾಡಿದ ಶಾಸಕರ ವಿರುದ್ಧ ಕರವೇ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದರು.
 ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಬಸವೇಶ್ವರ ಬಜಾರ್ ಮೂಲಕ ಬಸವೇಶ್ವರ ವೃತ್ತದಲ್ಲಿ ಶಾಸಕರ ವಿರುದ್ಧ ಘೋಷಣೆ ಕೂಗುತ್ತಾ  ಧರಣಿ ನಡೆಸಿದರು.
 ಸಂಘಟನೆಯ ಮುಖಂಡ ಈ ಭರತ್ ಮಾತನಾಡಿ ಕ್ಷೇತ್ರದಲ್ಲಿ ಶಾಸಕರು ದೌರ್ಜನ್ಯ ಮಾಡುತ್ತಿದ್ದಾರೆ ಮಾತೆತ್ತಿದರೆ ಪೊಲೀಸರನ್ನು ಕರೆಸುತ್ತೇನೆ ಎನ್ನುತ್ತಾರೆ. ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಶಾಸಕರ ವರ್ತನೆಯಿಂದ  ಕ್ಷೇತ್ರದಲ್ಲಿ ಮತದಾರರು ತಲೆತಗ್ಗಿಸುವಂತೆ ಆಗಿದೆ ಎಂದರು.
 ಮತ್ತೊಬ್ಬ ಮುಖಂಡ ಜೋಗಿ ಹನುಮಂತ  ಮಾತನಾಡಿ ಸರ್ಕಾರ ವಿರುದ್ಧ 40% ಕಮಿಷನ್ ಮಾತನಾಡುವ ಶಾಸಕ ಭೀಮಾನಾಯ್ಕ್ ಈಗ ಏನು ಮಾಡುತ್ತಿದ್ದಾರೆ. ಬೆಂಗಳೂರಲ್ಲಿ  ಕಮಿಷನ್ ಅಡ್ಡೆಯಾಗಿ ಮಾಡಿಕೊಂಡು  ಲಂಚ ತೆಗೆದುಕೊಳ್ಳುವ ದೃಶ್ಯ ಇಡೀ ಕ್ಷೇತ್ರ ಮತ್ತು ರಾಜ್ಯ ನೋಡಿದೆ ಇಂಥ ಭ್ರಷ್ಟಾ ಶಾಸಕ ನಮ್ಮಲ್ಲಿದ್ದಾರಲ್ಲ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಿ ಮನೆಗೆ ಕಳಿಸಬೇಕು ಎಂದರು.
 ಮುಖಂಡರಾದ ಕನ್ನಿಹಳ್ಳಿ  ಚಂದ್ರಶೇಖರ್, ಶಿವಶಂಕರ್ ಸ್ವಾಮಿ  , ವಕೀಲ ಚಂದ್ರಶೇಖರ್, ಚಿಂತ್ರಪಳ್ಳಿ ನಾಗರಾಜ್, ಭರಮಜ್ಜ ನಾಯಕ್  ತಳವಾರ ರಾಘು  ಮಾತನಾಡಿದರು.
 ಈ ಸಂದರ್ಭದಲ್ಲಿ ಕರವೇ ಸಂಘಟನೆಯ ಭೀಮ್ ರಾಜ್ ರಾಜಾವಲಿ, ಮೂರ್ತಿ,, ಗಜೇಂದ್ರ, ಬಸವರಾಜ್  ಬಡೆಗೇರ್, ಬೋವಿ ಈಶ,  ಇತರರಿದ್ದರು