ಶಾಸಕ ಭೀಮನಾಯ್ಕ ವಿವಿಧ ಕಾಮಗಾರಿಗಳಿಗೆ ಚಾಲನೆ

ಸಂಜೆವಾಣಿ ವಾರ್ತೆ
ಕೊಟ್ಟೂರು 12;ಎಸ್ ಭೀಮನಾಯ್ಕ, ಶಾಸಕರು ಹಬೊಹಳ್ಳಿ ಹಾಗೂ ಅಧ್ಯಕ್ಷರು, ರಾಬಕೊ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಬಳ್ಳಾರಿ ರವರ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.ತಾಲೂಕಿನ ಹಾರಳು ಗ್ರಾಮದಲ್ಲಿ
ರೂ 12.00 ಲಕ್ಷ ಮೊತ್ತದ ನೂತನ ಅಂಬೇಡ್ಕರ್ ಭವನ ಕಟ್ಟಡ ಉದ್ಘಾಟನೆ,  ಸ.ಹಿ.ಪ್ರಾ.ಶಾಲೆಯಲ್ಲಿ ರೂ 37.40 ಲಕ್ಷ ಮೊತ್ತದ 04 ಶಾಲಾ ಕೊಠಡಿ ಉದ್ಘಾಟನೆ. 3. ರೂ 23.20 ಲಕ್ಷ ಮೊತ್ತದಲ್ಲಿ ಪೂರ್ಣಗೊಂಡ ಸಿ ಸಿ ರಸ್ತೆ ಕಾಮಗಾರಿ,*ಕೆ.ಅಯ್ಯನಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ರೂ 15.00 ಲಕ್ಷ ಮೊತ್ತದ ಗಣಕಯಂತ್ರ ಕೊಠಡಿ ನಿರ್ಮಾಣ ಮತ್ತು ರೂ 12.51 ಲಕ್ಷ ಮೊತ್ತದ ಸಿ ಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ.ಕನ್ನನಾಯಕನ ಕಟ್ಟೆರೂ 12.50 ಲಕ್ಷ ಮೊತ್ತದ ಸಿ ಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ. ಚಪ್ಪರದಳ್ಳಿ
: ರೂ 12.50 ಲಕ್ಷ ಮತ್ತು ರೂ 20.00 ಲಕ್ಷ ಮೊತ್ತದ ಸಿ ಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆನೇರವೇರಿಸಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂಎಂ ಜೆಹರ್ಷವರ್ಧನ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪಿಹೆಚ್ ದೊಡ್ಡ ರಾಮಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್, ಮಾಜಿ ಪಟ್ಟಣಪಂಚಾಯಿತಿ ಅಧ್ಯಕ್ಷ ಅನಿಲ್ ಹೊಸಮನಿ, ಸುಧಾಕರ್ ಗೌಡ ಪಾಟೀಲ್,
ದ್ವಾರಕೀಶ್ , ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ, ಸೇರಿದಂತೆ ಅನೇಕ ಮುಖಂಡರು ಇದ್ದರು.