ಶಾಸಕ ಭೀಮನಾಯ್ಕ ಗೂಂಡಾವರ್ತನೆ ಆರೋಪ ನಗರದಲ್ಲಿ ಬಿಜೆಪಿ ಪ್ರತಿಭಟನೆ

ಬಳ್ಳಾರಿ, ನ.9: ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಮೊನ್ನೆ ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾವರ್ತನೆ ತೋರಿದ್ದಾರೆಂದು ಆರೋಪಿಸಿ. ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಇಂದು ನಗರದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿ ಪಕ್ಷದ ನಗರ ಘಟಕ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ ಅವರ ನೇತೃತ್ವದಲ್ಲಿ ಶಾಸಕ‌ ಭೀಮಾನಾಯ್ಕ ವಿರುದ್ದ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿಗಳ‌ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು.
ಕಾರ್ಯಕರ್ತರ ನಡುವೆ ನಡೆದ ವಾದ ವಿವಾದವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಶಾಸಕ ಭೀಮಾನಾಯ್ಕ ತೊಡೆ ಭುಜ ತಟ್ಟಿ ಕಾರ್ಯಕರ್ತರನ್ನು ಪ್ರಚೋಧಿಸಿ ಮಾಜಿ ಶಾಸಕ ನೇಮಿರಾಜ ನಾಯ್ಕ ಹಾಗೂ ಭಾರತೀಯ ಪಾರ್ಟಿಯ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಅಧಿಕಾರದ ದರ್ಪವನ್ನು ಪ್ರದರ್ಶಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಾನು ದೇಶದ ಪ್ರಜಾಪ್ರಭುತ್ವವನ್ನು ಸಂವಿಧಾನವನ್ನು ಎತ್ತಿಹಿಡಿಯುತ್ತೇನೆಂದು ಹೇಳುತ್ತಿದೆ. ಅದೇ ಪಕ್ಷದ ಶಾಸಕನಿಂದ ಪ್ರಜಾಪ್ರಭುತ್ವದ ಕಗ್ಗೂಲೆಯಾಗಿದೆ. ರಾಜಕಾರಣದಲ್ಲಿ ವೈಚಾರಿಕ ಮತ, ಭೇದ ಇರುವುದು ಸಹಜ ಆದರೆ ಅದನ್ನು ಬದಿಗೊತ್ತಿ ಅಭಿವೃದ್ದಿಗೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ಶಾಸಕನ ಕರ್ತವ್ಯ ಅದು ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾವರ್ತನೆ ಸರಿಯಲ್ಲ.
ಭಾರತೀಯ ಜನತಾ ಪಾರ್ಟಿಯ ನಗರದ ಶಾಸಕರು ಪದಾಧಿಕಾರಿಗಳು, ಕಾರ್ಯಕರ್ತರು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಮತ್ತೊಮ್ಮೆ ಈ ಶಾಸಕನ ಗುಂಡಾವರ್ತೆನೆ ಪುನರಾವರ್ತನೆ ಆಗದಂತೆ ಇವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡುರುಗಳಾದ ಗಣಪಾಲ್ ಐನಾಥರೆಡ್ಡಿ, ಇಬ್ರಾಹಿಂ ಬಾಬು, ಕೆ.ಎಸ್.ಅಶೋಕ್ ಕುಮಾರ್, ರಾಮಾಂಜನೇಯ, ದಮ್ಮೂರು ಶೇಖರ್, ಜ್ಯೋತಿ ಪ್ರಕಾಶ್, ಸಂದೀಪ್ ವೀರೇಶ್, ರಾಜೇಶ್, ಅರುಣ ಬಾಲಚಂದ್ರ, ರಾಮಚಂದ್ರಯ್ಯ, ಶ್ರೀನಿವಾಸ ಪಾಟೀಲ್ ಮೊದಲಾದವರು ಇದ್ದರು.