ಶಾಸಕ ಭೀಮನಾಯ್ಕ್‌ನಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ: ಹರ್ಷವರ್ಧನ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.16: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕನನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವುದೆ ನಮ್ಮ ಗುರಿ ಎಂದು ಜಿ. ಪಂ. ಮಾಜಿ ಸದಸ್ಯ ಹರ್ಷವರ್ಧನ ಹೇಳಿದರು.
ಅವರು ಪಟ್ಟಣದಲ್ಲಿ ಬುಧವಾರ ಕರೆದಿದ್ದ ಸುದ್ಧಿಗೋಷ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಳ್ಳುಗಳ ಸರದಾರ ಶಾಸಕ ಭೀಮನಾಯ್ಕನನ್ನು ನಾವು ಕಳೆದ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಓಡಾಡಿ, ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಗೆಲ್ಲಿಸಿದ್ಧೆವು. ಈಗ ನಮ್ಮ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಇವರಿಗೆ ನೈತಿಕತೆ ಇದೆಯಾ ಎಂದು ಹರಿಹಾಯ್ದರು.
ಜೆಡಿಎಸ್ ಪಕ್ಷದಿಂದ ಶಾಸಕನಾಗಿ 5 ಕೋಟಿ ಪಡೆದು, ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡ್ಡ ಮತದಾನ ಮಾಡಿದ ಭೀಮನಾಯ್ಕನಿಗೆ ನೈತಿಕತೆಯಿಲ್ಲ, ಕಳೆದ ಚುನಾವಣೆಯಲ್ಲಿ ಮರಿಯಮ್ಮನಹಳ್ಳಿ ಭಾಗದಿಂದಲೇ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾನೆ. ಇಲ್ಲಿಂದಲೇ ಇಲ್ಲಿನ ಮತದಾರರು ಸೋಲಿಸಲು ಮುಂದಾಗ ಬೇಕು ಎಂದರು.
ಮುಖಂಡ ಬುಡ್ಡಿಬಸವರಾಜ ಮಾತನಾಡಿ, ಸಾಮಾಜಿಕ ನ್ಯಾಯದಡಿಯಲ್ಲಿ ಹ.ಬೊ.ಹಳ್ಳಿ ಕ್ಷೇತ್ರಕ್ಕೆ ಈ ಬಾರಿ ಪರಿಶಿಷ್ಷ ಜಾತಿಯ ಯಾವುದೇ ಪಂಗಡದ ಆಕಾಂಕ್ಷಿಗೆ ಟಿಕೆಟ್ ಕೊಡಲು ನಮ್ಮ ಒತ್ತಾಯವಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಭೀಮನಾಯ್ಕನಿಗೆ ಟಿಕೆಟ್ ನೀಡಬಾರದು, ಪಕ್ಷ ಟಿಕೆಟ್ ಕೊಟ್ಟಿದ್ದೆಯಾದರೆ ನಾವು ಭೀಮನಾಯ್ಕನನ್ನು ಸೋಲಿಸಲು ಮುಂದಾಗುತ್ತೇವೆ. ವಿನಾಕಾರಣ ನಮ್ಮ ಮೇಲೆ ಹಣದ ಬೇಡಿಕೆ ಇಟ್ಟಿದ್ದೇವೆ ಎಂದು ಆರೋಪಿಸಿರುವುದನ್ನು ಅವರು ಸಾಬೀತುಪಡಿಸಲಿ. ಆತನು ಗುತ್ತಿಗೆದಾರರಿಂದ ಎಷ್ಟು ಕಮಿಷನ್ ಪಡೆದಿದ್ದಾನೆ ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಸಾಬೀತು ಪಡಿಸಲು ಮುಂದಾಗುತ್ತೇವೆ ಎಂದರು.
2008ರ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡಿವೇಟ್ ನಲ್ಲಿ ಕೇವಲ ಎರಡು ವಾಹನಗಳು, ಭೂಮಿ ಇರಲಿಲ್ಲ, 2018ರಲ್ಲಿ 8 ಕಾರು, 23 ಎಕರೆ ಕೃಷಿಯೇತರ ಭೂಮಿ, 40 ಎಕರೆ ಜಮೀನು ಪತ್ನಿ ಹೆಸರಲ್ಲಿದೆ. ಅಲ್ಲದೇ ಬೆಂಗಳೂರಿನಲ್ಲಿ 7.10 ಕೋಟಿ ರೂ.ಬಾಳುವ ಎರಡು ವಾಣಿಜ್ಯ ಮಳಿಗೆಗಳು ಸೇರಿದಂತೆ ಅಪಾರ ಅಕ್ರಮ ಆಸ್ತಿ ಎಲ್ಲಿಂದು ಬಂತು ಎಂದು ಪ್ರಶ್ನಿಸಿದರು. ಕೇವಲ ಹತ್ತು ವರ್ಷಗಳಲ್ಲಿ ಕೋಟ್ಯಾಂತರ ರೂ.ಗಳ ಆಸ್ತಿ ಸಂಪಾದಿಸಿದ್ದು ಅಕ್ರಮಗಳಿಂದಲೇ ಅಲ್ಲದೇ ಮತ್ತಿನ್ನೇನು ? ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ನ್ಯಾಯವಾದಿ ಸಿ.ಬಸವರಾಜ, ಮುಖಂಡ ದೊಡ್ಡರಾಮಣ್ಣ, ಕನ್ನಿಹಳ್ಳಿ ಚಂದ್ರು, ಸುಧಾಕರ ಪಾಟೀಲ, ಕೆ.ಎಚ್.ಸುಬ್ರಹ್ಮಣ್ಯ, ಕಡ್ತರ ಮೋದೀನ್ ಸಾಬ್, ಮುಟುಗನಹಳ್ಳಿ ಕೊಟ್ರೇಶ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೊಟ್ರೇಶ, ಈ.ಎರಿಸ್ವಾಮಿ ಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಾರುತಿ ಬ್ಯಾಲಕುಂದಿ, ತಾ.ಪಂ.ಮಾಜಿಸದಸ್ಯ ಹೆಚ್.ಲಕ್ಷ್ಮಣ, ಪರಶುರಾಮ, ಅಂಕ್ಲೇಶ,ಬಿ.ರಮೇಶ್, ಅನಿಲ್ ಜಾಣ, ತಾ.ಪಂ.ಮಾಜಿ ಸದಸ್ಯ ಅಂಜಿನಪ್ಪ, ಕೆ.ರಾಜಸಾಬ್, ಕೆ.ಹಸೇನ್, ಎ.ಅಲ್ಲಾಭಕ್ಷಿ ಹಾಗೂ ಇತರರು ಇದ್ದರು‌.