ಶಾಸಕ ಭರತ್ ಕಚೇರಿ ಮೇಲೆಎರಡು ದಿನಗಳ ಇಡಿ ದಾಳಿ ಅಂತ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.12:  ನಗರ ಶಾಸಕ ನಾರಾ ಭರತ್ ರೆಡ್ಡಿ  ಮತ್ತವರ ಸಂಬಂಧಿಕರು, ಆಪ್ತರ ಮನೆ ಮತ್ತು ಕಚೇರಿ‌ ಮೇಲೆ ಇಡಿ ಅಧಿಕಾರಿಗಳು ನಡೆಸಿದ್ದ ಎರೆಡು ದಿನಗಳ ದಾಳಿ ಅಂತ್ಯಗೊಂಡಿದೆ.
ಮೊನ್ನೆ ಫೆ 9 ರಂದು ಬೆಳಿಗ್ಗೆ 6 ಕ್ಕೆ ಬೆಂಗಳೂರಿನಿಂದ ಬಂದ 20 ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ. ಭರತ್ ರೆಡ್ಡಿ, ಅವರ ಚಿಕ್ಕಪ್ಪ, ಪ್ರತಾಪ್ ರೆಡ್ಡಿ ಮತ್ತವರ ಆಪ್ತರ ಮನೆ ಹಾಗು ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ಅಂದು ಸಂಜೆ ವೇಳೆಗೆ ಎಲ್ಲಡೆ ದಾಳಿ ಮುಗಿದು. ಗಾಂಧಿನಗರದ  ಶಾಸಕರಿಗೆ ಸೇರಿದ ರಾಘವೇಂದ್ರ ಎಂಟರ್ಪ್ರೈಸಸ್ ಕಚೇರಿಯಲ್ಲಿ ದಾಳಿ ಮುಂದುವರೆದಿತ್ತು.
ನಿನ್ನೆ ಫೆ 10 ತಡ ರಾತ್ರಿವರೆಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮಧ್ಯರಾತ್ರಿ ವೇಳೆಗೆ ದಾಳಿಯನ್ನು ಅಂತ್ಯಗೊಳಿಸಿ ಹಾರ್ಡ್ ಡಿಸ್ಕ್, ದಾಖಲೆ ಪತ್ರಗಳಿಗೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಮೊದಲಾದವರಿಂದ
ಸಹಿ ಪಡೆದು ನಾಲ್ಕು ಬ್ಯಾಗ್ ಗಳಲ್ಲಿ ತೆಗೆದು ಕೊಂಡು ಇಡಿ ಅಧಿಕಾರಿಗಳ ತಂಡ ತೆರಳಿದರು.
ಇದು ಬಹುತೇಕ ರಾಘವೇಂದ್ರ ಎಂಟರ್ಪ್ರೈಸಸ್ ಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ಎಂದು ಹೇಳಲಾಗುತ್ತಿದೆ.
ಇಡಿ ಅವರು ಬಳ್ಳಾರಿಯಲ್ಲಿ ನಡೆಸಿದ ಎರಡನೇ ದಾಳಿ ಇದಾಗಿದೆ.
ಈ ಮೊದಲು ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ಸಿಬಿಐ, ಐಟಿ ದಾಳಿ ನಂತರ ಇಡಿಯವರ ದಾಳಿ ಓಎಂಸಿ ಕಂಪನಿ ಕಚೇರಿ ಮೇಲೆ ನಡೆದಿತ್ತು.

One attachment • Scanned by Gmail