ಶಾಸಕ ಬೆಲ್ದಾಳೆಯವರಿಂದ ಸಂಕ್ರಾಂತಿ ಆಚರಣೆ

ಬೀದರ್ :ಜ.16:ನಗರದ ಪ್ರತಾಪ ನಗರದಲ್ಲಿ ಶಾಸಕರ ಕಚೇರಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಕಾರ್ಯಕರ್ತರೊಂದಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು,
ಸಂಕ್ರಾಂತಿ ಹಬ್ಬವು ಸುಗ್ಗಿಯ ಸಂಭ್ರಮ, ಹಸುಗಳ ಕಿಚ್ಚು ಹಾಯಿಸುವ ಕಾತುರ, ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಖುಷಿಯೇ ಹಬ್ಬವಾಗಿದೆ.

ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ ಇದಾಗಿದೆ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಮಾಗಿಯ ಚಳಿ ಮಾಯವಾಗಿ ಸೂರ್ಯನ ರಶ್ಮಿ ಭೂಮಿಗೆ ಚುಂಬಿಸುವ ವೇಳೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ. ಮತ್ತೊಮ್ಮೆ
ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.ನಾಡಿನ ಹಾಗೂ ವಿಶೇಷವಾಗಿ ಬೀದರ್ ಜಿಲ್ಲೆ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲಾ ನನ್ನ ಬಂಧುಗಳಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.