ಶಾಸಕ ಬಸವರಾಜ ದಡೇಸುಗೂರು ರಿಂದ ಬಾಗಿನ

ಕಾರಟಗಿ ಆ 24: ಕೊಪ್ಪಳ ಬಳ್ಳಾರಿ ರಾಯಚೂರು ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಭಾನುವಾರ ದಂದು ಶಾಸಕ ಬಸವರಾಜ ದಡೇಸುಗೂರು ಬಾಗಿನ ಅರ್ಪಿಸಿದರು.
ಜಲಾಶಯ ದಡದಲ್ಲಿ ಶಾಸಕರ ಧರ್ಮಪತ್ನಿ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ್ ಮುಸಾಲಿ ದಂಪತಿಗಳು ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಶಾಸಕರು ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗಿ ಭರ್ತಿಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ ಅದೇ ರೀತಿಯಾಗಿ ಮುಂಬರುವ ದಿನಗಳಲ್ಲಿ ರೈತರ ಬೆಳೆಗಳು ಚೆನ್ನಾಗಿ ಬೆಳದು ಅಭಿವೃದ್ಧಿ ಹೊಂದಲಿ ಕಾಲಕ್ಕೆ ತಕ್ಕಂತೆ ಸರಿಯಾದ ಮಳೆ ಬೆಳೆಗಳು ಚನ್ನಾಗಿ ಬೆಳೆದು ಅಭಿವೃದ್ಧಿಯಾಗಿ ಹೊಂದಲು ಆಶಿಸುತ್ತೇನೆ ಎಂದು ಹೇಳಿದರು.ಮಾಜಿ ಸಚಿವ ನಾಗಪ್ಪ ಸಾಲೋಣಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ.ಎಪಿಎಂಸಿ ಅಧ್ಯಕ್ಷ ಸೋಮಶೇಖರ್ ಗೌಡ ಮುಷ್ಟೂರು. ನಾಗರಾಜ್ ಬಿಲ್ಗಾರ್. ಬಿ ಬಸವರಾಜಪ್ಪ.ಜಿ ತಿಮ್ಮನಗೌಡ. ಸಣ್ಣಕನಕಪ್ಪ. ಕೆ ಎನ್ ಪಾಟೀಲ್. ನ್ಯಾಯವಾದಿ ಶ್ರೀಗೌರಿ ಕುಲಕರ್ಣಿ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರತ್ನಕುಮಾರಿ. ಎಸ್ಟಿ ಮೋರ್ಚಾ ಹುಲಿಗೆಮ್ಮ ನಾಯಕ ಸೇರಿ ವಿವಿಧ ಬಿಜೆಪಿ ಘಟಕದ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.