ಶಾಸಕ ಬಂಡೆಪ್ಪ ಖಾಷೆಂಪುರಗೆ ಕೋವಿಡ್ ಸೋಂಕು ದೃಢ

ಬೀದರ:ನ.6: ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾದ, ಶಾಸಕ ಬಂಡೆಪ್ಪ ಖಾಶೆಂಪುರ್ ಅವರಿಗೆ ಕೋವಿಡ್19 ಸೋಂಕು ದೃಢಪಟ್ಟಿದೆ.

ಗುರುವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ನನಗೆ ಕೋವಿಡ್ ಸೋಂಕು ತಗುಲಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ 4-5 ದಿನಗಳಿಂದ ನನ್ನ ನೇರ ಸಂಪರ್ಕ ಹೊಂದಿರುವ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶಾಸಕರು ಸಾಮಾಜಿಕ ಜಾಲ ತಾಣ ಮೂಲಕ ಮನವಿ ಮಾಡಿದ್ದಾರೆ.

ತಾಯಿ ಭವಾನಿ ಮಾತೆಯ ಆಶೀರ್ವಾದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ಶೀಘ್ರ ಗುಣಮುಖನಾಗಿ ಬಂದು ಸದಾ ನಿಮ್ಮ ಸೇವೆಗೆ ಸಿದ್ದ ಇರುತ್ತೇನೆ ಎಂದೂ ಖಾಶೆಂಪುರ್ ತಿಳಿಸಿದ್ದಾರೆ.