ಶಾಸಕ ಪ್ರಿಯಾಂಕ ಖರ್ಗೆಗೆ ಕೊಲೆ ಬೆದರಿಕೆ ಮಣಿಕಂಠ ರಾಠೋಡ ಗಡಿಪಾರಿಗೆ ಆಗ್ರಹ

ಶಹಾಪುರ ನ 18: ಚಿತ್ತಾಪುರ ಶಾಕ ಪ್ರೀಯಂಕ ಖರ್ಗೆ ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶೂಟೌಟ ಮಾಡುತ್ತೆನೆ ಎಂದು ಹೆಳಿಕೆ ನೀಡಿರುವ ಮಣಿಕಂಠ ರಾಠೋಡ ರವರನ್ನು ಗಡಿಪಾರು ಮಾಡುವಂತೆ ದೋರನಹಳ್ಳಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಒತ್ತಾಯ ಮಾಡಲಾಯಿತು. ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬಿಜೆಪಿ ಕಾರ್ಯಕರ್ತ ಮಣಿಕಮಠ ರಾಠೋಡ ರವರನ್ನು ಗಡಿಪಾರು ಮಾಡುವಂತೆ ಬೃಹತ್ ಪ್ರತಿಭಟನೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು. ಇದೆ ನವೆಂಬರ್ 11 ರನದು ಬಿಜೆಪಿ ಕಾರ್ಯಕರ್ತ ಮಣಿಕಂಠ ರಾಠೋಡ ರವರು ಪ್ರೀಯಂಕ ಖರ್ಗೆ ರವರಿಗೆ ಶೂಟೌಟ್ ಮಾಡುತ್ತೆನೆ ಎಂದು ಹೆಳಿಕೆ ನೀಡಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮತ್ತು ಕೊಮು ಗಲಭೆ ಸೃಷ್ಟಿಸುವ ಹೆಳಿಕೆ ನೀಡಿರುವ ಮಣಿಕಂಠ ರಾಠೋಡ ರವರನ್ನು ಗಡಿಪಾರು ಮಾಡುವಂತೆ ಮನವಿ ಪತ್ರ ಸಲ್ಲಿಸಿ ನಿಜಗುಣ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಶರಣು ದೋರನಹಳ್ಳಿ ಮಾತನಾಡಿ ಯಾವುದೇ ಕಪ್ಪು ಚುಕ್ಕಿಯಿಲ್ಲದೆ ಸಮರ್ಥ ವಾಗಿ ತಮ್ಮ ಕಾರ್ಯನಿರ್ವಹಿಸುತ್ತಿರುವ ಪ್ರೀಯಂಕ ಖರ್ಗೆ ಅವರಿಗೆ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಮಾನಪ್ಪ ಹುಲಸೂರ, ಶರಣು ದೋರನಹಳ್ಳಿ, ಶುವು ಪೆÇೀತೆ , ಹಣಮಂತ ಶಹಾಪುರ, ಸಿದ್ದಪ್ಪ ರಾಖಂಗೇರಾ, ಭೀಮರಾಯ, ಮಲ್ಲಿಕಾರ್ಜುನ ಉಕ್ಕಿನಾಳ, ಅಂಬರೀಶ್ ಹಾಲಬಾವಿ, ರಾಯಪ್ಪ ಸೇರಿದಂತೆ ಅನೇಕ ಪ್ರೀಯಂಕ ಖರ್ಗೆಜಿಯವರ ಅಭಿಮಾನಿಗಳು ಪ್ರತೀಭಟನೆಯಲ್ಲಿ ಉಪಸ್ಥಿತರಿದ್ದರು.