ಶಾಸಕ ಪ್ರದೀಪ್ ನಿವಾಸದ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ. ಜೂ. ೫-ನಗರದ ಹೊರವಲಯದ ಗಣೇಶ್ ಪದ್ಮ ಲೇಔಟ್ ನಲ್ಲಿ ಇರುವ ಶಾಸಕ ಪ್ರದೀಪ್ ಈಶ್ವರ್‌ರವರ ಮನೆಗೆ ನಿನ್ನೆ ರಾತ್ರಿ ಕಿಡಿಗಾಡಿಗಳು ಕಲ್ಲುಗಳನ್ನು ಎಸೆತಿದ್ದು ಶಾಸಕರ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ನಿನ್ನೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದು ವಿಜೇತ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ರವರ ವಿಜಯೋತ್ಸವವೂ ಸಹ ನಡೆಯಿತು. ಗುರುತು ಸಿಗದ ಕೆಲವರು ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆಗೆ ಅಂಟಿಕೊಂಡಿರುವಂತೆ ಕಂದವಾರ ಗ್ರಾಮದ ಸಮೀಪ ಇರುವ ಶಾಸಕ ಪ್ರದೀಪ್ ಈಶ್ವರ್ ರವರ ಮನೆಗೆ ಕಲ್ಲೆಸೆದು ಪರಾರಿಯಾಗಿದ್ದಾರೆ.
ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಈ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಿದರು. ಕಳೆದ ರಾತ್ರಿ ಕಲ್ಲೆಸೆತ ಪ್ರಕರಣ ನಡೆದ ಸಂದರ್ಭದಲ್ಲಿ ಶಾಸಕರು ಮನೆಯಲ್ಲಿ ಇರಲಿಲ್ಲ ಬೆಳಗ್ಗೆ ಪ್ರಕರಣದ ಬಗ್ಗೆ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದಾಗ ನನಗೂ ಸಹ ಈ ವಿಷಯ ತಿಳಿದು ಬಂದಿತು ನಾನು ಈ ಬಗ್ಗೆ ಕೂಲಂಕುಶ ತನಿಕೆಗೆ ಪೋಲಿಸ್ ಇಲಾಖೆಗೆ ತಿಳಿಸಿದ್ದು ಬೆಂಗಳೂರಿನಿಂದ ಶ್ವಾನ ದಳ ಮತ್ತು ಇತರ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ಸದರಿ ಪ್ರಕರಣವನ್ನು ನಾನು ಮುಖ್ಯಮಂತ್ರಿಗಳಿಗೂ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತಂದಿರುತ್ತೇನೆ ಅವರು ಸಹ ಪ್ರಕರಣದ ತೀವ್ರತೆಯನ್ನು ಗಮನಿಸಿ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ನಡೆದು ಒಂದು ವರ್ಷವಾಯಿತು ಈ ವರ್ಷದ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಬಂದ ದಿನವೇ ಈ ರೀತಿ ಕಿಡಿಗೇಡಿಗಳು ರಾಜಕೀಯ ಮತ್ಸರದಿಂದ ಈ ರೀತಿ ಕಲ್ಲೆಸೆದಿರುವುದು ತಮ್ಮ ಕ್ಷೇತ್ರದಲ್ಲಿ ರಾಜಕೀಯ ಮತ್ಸಾರದ ವಾತಾವರಣ ಉಂಟಾಗಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು

ರಾಜೀನಾಮೆ ಆಗ್ರಹ
ಲೋಕಸಭೆ ಮೆಟ್ಟಿಲನ್ನು ಸಹ ಹತ್ತಲು ನಾನು ಬಿಡುವುದಿಲ್ಲ ಒಂದು ವೇಳೆ ಈ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಸ್ಪರ್ಧಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ರವರ ವಿರುದ್ಧ ಒಂದೇ ಒಂದು ಅಧಿಕ ಮತವನ್ನು ಪಡೆದರೂ ಸಹ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಹಿರಂಗವಾಗಿ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸವಾಲೆಸಿದ್ದರು.ಈಗ ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲೂ ಅಧಿಕ ಮತ ಪಡೆದಿದ್ದಾರೆ. ಈ ಕಾರಣದಿಂದ ಈಗ ಶಾಸಕ ಪ್ರದೀಪ್ ಈಶ್ವರ ಅವರು ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸು ಬಾ ಎಂದು ವಿಜೇತ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ರವರ ಅಭಿಮಾನಿಗಳು ಆಗ್ರಹಿಸಿದ್ದಾರೆ.