
ಚಿಕ್ಕಬಳ್ಳಾಪುರ.ನ.೫:ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ರವರನ್ನ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಗುರ್ತಿಸಿ ತೆಲಂಗಾಣ ರಾಜ್ಯದ ಬಾಲಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ನಿಯೋಜಿಸಿ ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರವರು ಆದೇಶಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಸದಸ್ಯ ಪ್ರದೀಪ್ ಈಶ್ವರ್ ಅವರು ಸಮೂಹವನ್ನು ಮಾತಿನಲ್ಲಿ ಮೋಡಿ ಮಾಡುವ ಮಾಂತ್ರಿಕ ಶಕ್ತಿಯನ್ನು ಹೊಂದಿರುವುದು ಸಹ ಅವರ ಈ ಆಯ್ಕೆಗೆ ಒತ್ತು ನೀಡಿದಂತಾಗಿದೆ.
ಅವರು ರಾಜಕೀಯ ಪ್ರವೇಶಿಸಿದ ಪ್ರಥಮ ಹೆಜ್ಜೆಯಲ್ಲಿಯೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ೨೨ ದಿನ ಮಾತ್ರ ಪ್ರಚಾರ ನಡೆಸಿ ಭಾರತೀಯ ಜನತಾ ಪಕ್ಷದ ಅತ್ಯಂತ ಪ್ರಭಾವಿ ಹಾಗೂ ಬಲಿಷ್ಠ ಅಭ್ಯರ್ಥಿ ಎನಿಸಿದ್ದ ಡಾಕ್ಟರ್ ಕೆ ಸುಧಾಕರ್ ರವರನ್ನು ೧೦,೦೦೦ಕ್ಕೂ ಅಧಿಕ ಮತಗಳಿಂದ ಪರಾಜಿತ ಗೊಳಿಸಿದ್ದರು.