ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಕ್ರಮಕ್ಕೆ ಇಡಿ ಪತ್ರ*ಚುನಾವಣಾ ಆಯೋಗಕ್ಕೆ  ಇಡಿ ಮನವಿ.*ಕಳೆದ ಎಲೆಕ್ಷನ್‌ಲ್ಲಿ 42 ಕೋಟಿ ರು. ಸಂಗ್ರಹಿಸಿದ್ದ ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ನವದೆಹಲಿ, ಏ.24: ಕಳೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ವಿವಿಧ ಅಕ್ರಮ ಮಾರ್ಗಗಳ ಮೂಲಕ 42 ಕೋಟಿ ರು. ಸಂಗ್ರಹಿಸಿ ಅದನ್ನು ಚುನಾವಣೆಗೆ ಬಳಕೆ ಮಾಡಿದ್ದ ಆರೋಪದಡಿ ನಗರದ ಶಾಸಕ ನಾರಾ ಭರತ್ ರೆಡ್ಡಿ  ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಇಡಿ ಪತ್ರ ಬರೆದಿದೆ.
ಇದೇ ವೇಳೆ ಇಡಿ ತಾನು ಪ್ರಕರಣದಲ್ಲಿ ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅನುಸಾರ ಪರಿಶೀಲಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೂ  ಪತ್ರ ಬರೆದಿದೆ. ಕಳೆದ ಫೆಬ್ರವರಿಯಲ್ಲಿ
ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಹಲವು ಸ್ಥಳಗಳಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಸ್ತಿಪಾಸ್ತಿಗಳಲ್ಲಿ ಇ.ಡಿ.ಶೋಧ ನಡೆಸಿ, 31 ಲಕ್ಷ ರು. ನಗದು ಹಣ ವಶಪಡಿಸಿಕೊಂಡಿತ್ತು.
ಅಲ್ಲದೆ, ರೆಡ್ಡಿ ಅವರು ವಿಧಾನಸಭೆಗೂ ಚುನಾವಣೆಗೂ ಮುನ್ನ 42 ಕೋಟಿ ರು. ಅಕ್ರಮ ಹಣ ಸಂಗ್ರಹಿಸಿ ಬಳಕೆ ಮಾಡಿದ್ದರು ಎಂದು  ಅದು ಆರೋಪಿಸಿತ್ತು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಆಯೋಗ, ‘ವಿಧಾನಸಭೆ ಚುನಾವಣೆಗೂ ಮುನ್ನ 42 ಕೋಟಿ ರು. ಗಳನ್ನು ರೆಡ್ಡಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಚುನಾವಣೆ ವೇಳೆ ಬಹುಪಾಲು ಹಣವನ್ನು ಮತದಾರಿಗೆ ಹಂಚಲಾಗಿದೆ.ಹಣದಮೂಲವನ್ನು ತಿಳಿಸಲು ರೆಡ್ಡಿ ವಿಫಲರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದೆ.