
ಸಿಂಧನೂರು. ಮಾ.೨೪ ನಿಮ್ಮ ಬಹುದಿನಗಳ ಬೇಡಿಕೆ ಯಾಗಿದ್ದ ಹಕ್ಕುಪತ್ರಗಳ ಸಮಸ್ಯೆಯನ್ನು ಬಗೆಹರಿಸಿ ಇಂದು ಹಕ್ಕುಪತ್ರಗಳನ್ನು ನೀಡುವ ಮೂಲಕ ನಾನು ನಿಮ್ಮ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ವೆಂಟರಾವ ನಾಡಗೌಡ ಹೇಳಿದರು.
ನಗರದ ಮೂರು ಮೈಲ್ ಕ್ಯಾಂಪ ರೇಣುಕಾ ಆಶ್ರಮದ ಹಿಂದುಗಡೆ ಇರುವ ಜಾಗದಲ್ಲಿ ವಾಸ ಮಾಡುವ ಸುಮಾರು ೭೧ ಜನ ಬಡ ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಸುಮಾರು ೭೮ ಜನರು ಹಕ್ಕುಪತ್ರ ಕ್ಕಾಗಿ ಅರ್ಜಿಗಳನ್ನು ಹಾಕಿದ್ದು ಅವುಗಳಲ್ಲಿ ಈಗ ೭೧ ಜನರಿಗೆ ಹಕ್ಕುಪತ್ರ ನೀಡಿದ್ದು ಉಳಿದ ಜನರಿಗೆ ಮುಂದಿನ ದಿನಗಳಲ್ಲಿ ನೀಡಲಾಗುತ್ತೇದೆ ಯಾವದೆ ಕಾರಣಕ್ಕೂ ಮನೆ ಬಾಡಿಗೆ ಕೊಡುವುದು ಹಾಗೂ ಮಾರಾಟ ಮಾಡದೆ ನೀವು ವಾಸ ಮಾಡಬೇಕು ಎಂದು ಪಲಾನುಭವಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು.
ಬಡ ಪಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರಗಳನ್ನು ನೀಡಿದ್ದು ಯಾರು ನಿಮ್ಮ ಮನೆ ಬಾಡಿಗೆ ನೀಡುವುದು ಹಾಗೂ ಮಾರಾಟ ಮಾಡಿದ ಬಗ್ಗೆ ಕಂಡು ಬಂದರೆ ಅಂಥವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೇದೆ ಎಂದು ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಪಲಾನುಭವಿಗಳಿಗೆ ಎಚ್ಚರಿಕೆಯನ್ನು ನೀಡಿ ಮಾತನಾಡಿದ ಅವರು ಹಕ್ಕುಪತ್ರ ಗಳನ್ನು ನೀಡುವ ಮೂಲಕ ನಿಮ್ಮ ಕನಸು ನನಸು ಮಾಡಲಾಗಿದೆ ಎಂದರು.
ತಹಸೀಲ್ದಾರ ಅರುಣ ಕುಮಾರ ದೇಸಾಯಿ ನಗರ ಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ. ಸದಸ್ಯರಾದ ಶರಣಪ್ಪ. ದಾಸರಿ ಸತ್ಯ ನಾರಾಯಣ. ಮುನಿರಪಾಷ. ಮುಖಂಡರಾದ ಆಭಿಷೇಕ ನಾಡಗೌಡ. ಅಲ್ಲಮ ಪ್ರಭು ಪೂಜಾರ. ಅಜಯ ದಾಸರಿ. ಶಿವಕುಮಾರ ನಾಯಕ. ಗದ್ದೆಪ್ಪ. ಮಲ್ಲಿಕಾರ್ಜುನ. ಹುಸೇನಸಾಬ. ರಾಮಣ್ಣ. ಅಬ್ದುಲ್ ಸಾಬ. ಲಿಂಗರಾಜ. ಸೇರಿದಂತೆ ಇತರರು ಇದ್ದರು.