ಶಾಸಕ ನಾಡಗೌಡರ ಜನ್ಮದಿನದ ನಿಮಿತ್ಯ ನೋಟಬುಕ್ ವಿತರಣೆ

ತಾಳಿಕೋಟೆ:ಅ.15: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ 66ನೇ ಜನ್ಮದಿನದ ನಿಮಿತ್ಯವಾಗಿ ಮಿಣಜಗಿ ಗ್ರಾಂ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಮಹಾಂತೇಶ ಬಿರಾದಾರ ಅವರು ತಮ್ಮ ವೈಯಕ್ತಿಕವಾಗಿ ಮಿಣಜಗಿ ಗ್ರಾಮದ ವಿಧ್ಯಾಭಾರತಿ ಶಾಲಾ ಮಕ್ಕಳಿಗೆ ನೋಟಬುಕ್‍ಗಳನ್ನು ವಿತರಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ ಅವರ ಜನ್ಮದಿನದ ಅಂಗವಾಗಿ ಬಡ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ನೋಟಬುಕ್‍ಗಳನ್ನು ವಿತರಿಸಲಾಗಿದೆ ಶಿಕ್ಷಣವೆಂಬುದು ಹುಲಿಯ ಹಾಲು ಇದ್ದಂತೆ ಅದನ್ನು ಕುಡಿದವರು ಘರ್ಜಿಸಲೇ ಬೇಕು ಅಂತಹ ಶಿಕ್ಷಣದತ್ತ ಇಂದಿನ ಮಕ್ಕಳು ಸಾಗಿ ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂದು ಆಶಿಸಿದರು.
ಈ ಸಮಯದಲ್ಲಿ ಶಾಲಾ ಮುಖ್ಯಗುರುಗಳಾದ ರಾಜಶೇಖರ ತೋಟದ, ಮುಖಂಡರಾದ ಮುದಿಯಪ್ಪ ನಾಯಕ, ಭೀರಪ್ಪ ಮಂಗ್ಯಾಳ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.