ಶಾಸಕ ನಾಡಗೌಡರಿಂದ ವೆಂಟಿಲೇಟರ್ ಉದ್ಘಾಟನೆ

ಸಿಂಧನೂರು.ಮೇ.೧೭-ಸೊಂಕಿತರ ಪ್ರಾಣ ಉಳಿಸುವ ಸಲುವಾಗಿ ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಎರಡು ವೆಂಟಿಲೇಟರ್‌ಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಘಾಟಿಸಿದರು.
ವೆಂಟಿಲೇಟರ್ ಉದ್ಘಾಟಿಸಿ ಮಾತನಾಡಿದ ಅವರು ರಾಯಚೂರು ಜಿಲ್ಲೆಯಲ್ಲಿಯೇ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದ್ದು ನುರಿತ ಸಿಬ್ಬಂದಿಗಳು ಇಲ್ಲದ ಕಾರಣ ವೆಂಟಿಲೇಟರ್ ಇಲ್ಲಿತನಕ ಆರಂಭಿಸಿರಲಿಲ್ಲ ಇದರಿಂದ ಸೋಂಕಿತರಿಗೆ ತುಂಬಾ ತೊಂದರೆಯಾಗಿತ್ತು.
ಸದ್ಯ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆರು ವೆಂಟಿಲೇಟರ್ ಇದ್ದು ಈಗ ಎರಡು ವೆಂಟಿಲೇಟರ್ ಆರಂಭಿಸಿದ್ದು ಇನ್ನೂಳಿದ ನಾಲ್ಕು ವೆಂಟಿಲೇಟರ್‌ಗಳನ್ನು ನುರಿತ ಸಿಬ್ಬಂದಿಗಳು ಬಂದ ಮೇಲೆ ಆರಂಭಿಸಲಾಗುತ್ತದೆ. ಕೊರೊನಾ ಸೊಂಕಿತರು ವೆಂಟಿಲೇಟರ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು ವೆಂಟಿಲೇಟರ್ ಇಲ್ಲದೆ ದೂರದ ರಾಯಚೂರು ಆಸ್ಪತ್ರೆಗೆ ಹೋಗಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದು ಹಲವು ರೋಗಿಗಳು ಪ್ರಾಣ ಕೂಡ ಕಳೆದುಕೊಂಡಿದ್ದು ವೆಂಟಿಲೇಟರ್ ಆರಂಭದಿಂದ ದೂರದ ರಾಯಚೂರಿಗೆ ಹೋಗುವ ಸೋಂಕಿತರು ವೆಂಟಿಲೇಟರ್ ಆರಂಭದಿಂದ ತಾಪತ್ರಯ ತಪ್ಪಿದಂತಾಗಿದೆ.
ತೀವ್ರ ತೊಂದರೆ ಇರುವ ಸೊಂಕಿತರನ್ನು ಅಲಕ್ಷ್ಯ ಮಾಡದೆ ವೆಂಟಿಲೇಟರ್ ನೀಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸೊಂಕಿತರ ಪ್ರಾಣವನ್ನು ಉಳಿಸಬೇಕೆಂದು ವೈದ್ಯಾಧಿಕಾರಿ ಗಳಿಗೆ ಶಾಸಕ ನಾಡಗೌಡ ಸೂಚನೆ ನೀಡಿದರು.
ವೆಂಟಿಲೇಟರ್ ಉದ್ಘಾಟಿಸಿದ ನಂತರ ಆಸ್ಪತ್ರಯಲ್ಲಿರುವ ಕೊವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೊಂಕಿತರ ಆರೋಗ್ಯ ವಿಚಾರಿಸಿದ ನಾಡಗೌಡರು ಔಷಧಿ ಮಳಿಗೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಔಷಧಿ ವಿತರಕ ಶಶಿಧರ ಮಾತ್ರ ಹಾಜರಿದ್ದು ಉಳಿದ ಸಿಬ್ಬಂದಿ ಮರಿಸ್ವಾಮಿ ಗೈರಾಜರು ಎದ್ದು ಕಾಣುತ್ತಿತ್ತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತ ರಡ್ಡಿ ,ಟಿ.ಎಚ್.ಒ ಡಾ.ಅಯ್ಯನಗೌಡ, ಡಾ.ಕೊನಿಕಾ, ಡಾ.ಶೃತಿ ಎಸ್ ,ಡಾ.ಜೀವನೇಶ್ವರಯ್ಯ, ಡಾ.ರವಿ ,ಡಾ.ವಿಜಯ ಮಹಾಂತೇಶ, ಡಾ.ಗಂಗಾಧರ, ಡಾ.ಮಣಿಕಂಠ,ಡಾ ವಿರೇಶ ,ಜೆಡಿಎಸ್ ಮುಖಂಡರಾದ ಬಸವರಾಜ ನಾಡಗೌಡ, ನಾಗೇಶ ಹಂಚಿನಾಳ ಕ್ಯಾಂಪ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.
ತಾಲೂಕಿನಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ತಾಲುಕ ಆರೋಗ್ಯಾಧಿಕಾರಿ ಕಚೇರಿ ಸುತ್ತಮುತ್ತ ಸೊಂಕಿತರು ನಡೆದಾಡುತ್ತಿದ್ದು ಇದರಿಂದ ನಮಗೆ ಸೊಂಕು ಹರಡುವ ಭಯದಿಂದ ತಾಲುಕ ಆಡಳಿತಾತ್ಮಕ ಕಛೇರಿಯನ್ನು ತಾತ್ಕಾಲಿಕ ವಾಗಿ ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಸಿಬ್ಬಂದಿಗಳು ಶಾಸಕ ನಾಡಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಕಚೇರಿಯಲ್ಲಿ ಗರ್ಭಿಣಿಯರು, ಬಿಪಿ ,ಶುಗರ್ ಹಾಗೂ ೫೦ ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕೊರೊನಾ ಸೊಂಕಿತರ ಓಡಾಟದಿಂದ ತೀವ್ರ ತೊಂದರೆಯಾದ ಕಾರಣ ಆಡಳಿತ ಕಛೇರಿಯನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಅಥವಾ ಶಾಶ್ವತವಾಗಿ ಒದಗಿಸಿಕೊಡಬೇಕೆಂದು ಸಿಬ್ಬಂದಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ಎಪಿಎಂಸಿ ಯಲ್ಲಿರು ಈ ಮುಂಚೆ ಇದ್ದ ಸಂಚಾರಿ ಪೋಲಿಸ್ ಠಾಣೆಯಲ್ಲಿ ತಾತ್ಕಾಲಿಕ ವಾಗಿ ವ್ಯವಸ್ಥೆ ಮಾಡಿಕೊಡುವದಾಗಿ ಶಾಸಕ ನಾಡಗೌಡ ಭರವಸೆ ನೀಡಿದರು.
ಸಿಬ್ಬಂದಿಗಳಾದ ಎಫ್.ಎ ಹಣಗಿ ,ಸಂಗನಗೌಡ ಪಾಟೀಲ ,ತ್ರಿವೇಣಿ, ರಂಗನಾಥ ಗುಡಿ ,ಚನ್ನಬಸವ, ಆರ್.ಬಿ.ಎಸ್
ಕೆ ತಂಡ ಹಾಗೂ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ಸುಮೀತ್ರಾ ಹಿರೇಮಠ ,ಔಷಧಿ ವಿತರಕರಾದ ಪವನ್ ಭಟ್ ,ವೀರಭದ್ರಪ್ಪ , ಡಾಟಾ ಆಪರೇಟರ್ ಸೇರಿದಂತೆ ಇತರರು ಹಾಜರಿದ್ದರು.