
ಸಿಂಧನೂರು,ಮಾ.೧೮- ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೆಂಟರಾವ ನಾಡಗೌಡ ಭೂಮಿ ಪೂಜೆಯನ್ನು ಮಾಡಿದರು.
ತಾಲೂಕಿನ ಕುನ್ನಟಿಗಿ ಗ್ರಾಮದಿಂದ ಪಗಡದಿನ್ನಿ ಗ್ರಾಮದ ರೈತರಿಗೆ ಡೈವರ್ಸನ್ ಕಾಲುವೆ ನಿರ್ಮಾಣ ಸಣ್ಣ ನೀರಾವರಿ ಇಲಾಖೆಯಿಂದ ೧೬೦,೦೦ ಲಕ್ಷ ವೆಚ್ಚದಲ್ಲಿ ಮಸ್ಕಿ ರಸ್ತೆಯಿಂದ ಮಲ್ಲಯ್ಯ ಕ್ಯಾಂಪ್ ತನಕ ಸಣ್ಣ ನೀರಾವರಿ ಇಲಾಖೆಯಿಂದ ೪೦,೫೦ ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪಗಡದಿನ್ನಿ ಗ್ರಾಮದ ಪ.ಪಂಗಡದ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೩೦, ೦೦ ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ವೆಂಟರಾವ ನಾಡಗೌಡ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥಸ್ವಾಮಿ, ರಾಮರೆಡ್ಡಿ, ಅಮರೆಗೌಡ, ಸುರೇಶ, ವೆಂಕೊಬಣ್ಣ ಕಲ್ಲೂರ, ರಮೇಶ ಕನ್ನಟಿಗಿ, ಸಣ್ಣ ಬಸಪ್ಪ, ವೆಂಕೊಬ ಬಾವಿಕಟ್ಟೆ, ಶಿವಪ್ಪ ನಾಯಕ, ಡಾ.ವೆಂಕಟೇಶ ಜವಳಗೇರಾ, ನಿರುಪಾದಪ್ಪ ನಾಯಕ, ಶರಣೆಗೌಡ ಸೇರಿದಂತೆ ಇತರರು ಉಪಸ್ಥಿತ್ತರಿದ್ದರು.