ಶಾಸಕ ದರ್ಶನಾಪುರ ಗುಣಮುಖರಾಗಲು ವಿಶೇಷ ಪೂಜೆ

ಶಹಾಪುರ:ಮಾ.15:ಜನಪ್ರೀಯ ಶಾಸಕ ಮಾಜಿ ಮಂತ್ರಿ ಹಾಲಿ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ಕೊವಿಡ್ ಸೊಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು. ಜನಪರ ಹಿತಕ್ಕಾಗಿ ಕ್ಷೇತ್ರದ ಪ್ರಗತಿಗಾಗಿ ಶಾಸಕ ದರ್ಶನಾಪುರವರುಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ ಕೈಗೊಳ್ಳಲಾಯಿತು.
ನಗರ ಆಶ್ರೆಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರುಪುರಕರ್ ರವರು, ನಗರದ ಸಂತ ಆರಾಧೈ ದೇವರಾದ ಹಜರತ್ ಸೈ, ಸಾಲಾರಸಾಹೇಬ್ ದರ್ಗಾದಲ್ಲಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ ದರ್ಗಾದ ಮುತುವಲಿಯವರು ಸೇರಿದಂತೆ ಅನೇಕರು ಹಾಜರಿದ್ದರು.