ಶಾಸಕ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಲು ಅಮಿನರಡ್ಡಿ ಪಾಟೀಲ್ ಮನವಿ

ಶಹಪುರ: ಮೇ.23:ಇಲ್ಲಿನ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಎರಡನೇ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಶ್ರೀ ಅಮಿನರಡ್ಡಿ ಪಾಟೀಲ್ ಕಿರದಳ್ಳಿ
ಅವರಿಂದ ಮನವಿ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯು ಅತಿ ಹಿಂದುಳಿದಿದೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಬರಗಾಲ ಪೀಡಿತ ಪ್ರದೇಶ ಇದ್ದು ಜಿಲ್ಲೆಗೆ ಅಭಿವೃದ್ಧಿಗಾಗಿ ನಾವು ಮತ್ತು ನಮ್ಮ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ದೊರೆ- ಯದೆ 13 ವರ್ಷ ಆಯ್ತು ನಮ್ಮ ಜಿಲ್ಲೆಯಲ್ಲಿ ಮಂತ್ರಿ ಸ್ಥಾನ ನೀಡಿಲ್ಲ ಜಿಲ್ಲಾ ಉಸ್ತುವಾರಿ ನೀಡಿಲ್ಲ ಬೇರೆ ಜಿಲ್ಲೆದವರಿಗೆ ಮಾಡಲಾಗಿದೆ.ಅವರಿಗೆ ಯಾದಗಿರಿ ಜಿಲ್ಲೆಯ ಪರಿಸ್ಥಿತಿ ಅವರಿಗೆ ಗೊತ್ತಿರುವುದಿಲ್ಲ ಹಾಗಾಗಿ ನಮ್ಮ ಯಾದಗಿರಿ ಜಿಲ್ಲೆ ಸಂಪೂರ್ಣವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಹಿಂದುಳಿಯಲು ಕಾರಣವಾಗಿದ್ದು ಬೇರೆ ಬೇರೆ ಜಿಲ್ಲೆಯವರಿಗೆ ಕೊಟ್ಟರೆ ಅವರು ಸರಿಯಾದ ಸಮಯಕ್ಕೆ ಬರಲು ಆಗುವುದಿಲ್ಲ ಅದಕ್ಕೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಅದಕ್ಕಾಗಿ ನಮ್ಮ ಜಿಲ್ಲೆಯ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಅಪಾರವಾದ ಅನುಭವ ಹೊಂದಿದ್ದಾರೆ ಮತ್ತು ಎರಡು ಬಾರಿ ಸಚಿವ ಸಂಪುಟದ ಮಂತ್ರಿಗಳಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ ಅದಕ್ಕೆ
ನಮ್ಮ ಜಿಲ್ಲೆದವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಮಾಡಬೇಕೆಂದು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶ್ರೀ ಆಮಿನರಡ್ಡಿ ಪಾಟೀಲ್ ಕಿರದಳ್ಳಿ ಮನವಿ ಮಾಡಿಕೊಂಡಿದ್ದಾರೆ.