ಶಾಸಕ ದರ್ಶನಾಪುರರಿಂದ ಹೊಲಿಗೆ ಯಂತ್ರ ವಿತರಣೆ

ಶಹಾಪುರ : ಜ.14:2021-22ನೇ ಸಾಲಿನ ಟಿಎಸ್ಪಿ ಯೋಜನೆಯಡಿ ನಾಗನಟಗಿ ಗೊಂಚಲ ಗ್ರಾಮಗಳ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ. ಅವುಗಳ ಲಾಭವನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.ನಾಗನಟಗಿ ಗ್ರಾಮದ
ಫಲಾನುಭವಿಗಳಾದ ಪಾರ್ವತಿ ತಂದೆ ಹೊನ್ನಪ್ಪ, ಭಾಗಮ್ಮ ಗಂಡ ಬಸವರಾಜ, ಲಕ್ಷ್ಮಿ ಗಂಡ ಯಂಕಪ್ಪ, ಸುಜಾತ ಗಂಡ ಮಹೇಶ, ಅಂಬಮ್ಮ ಗಂಡ ನಾಗರಾಜ ರವರಿಗೆ ಹೊಲಿಗೆ ಯಂತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಗಳಾದ ಮರಿಗೌಡ ಹುಲ್ಕಲ್, ಗೌಡಪ್ಪಗೌಡ ಆಲ್ದಾಳ್, ಶಿವುಮಾಂತಪ್ಪ ಚಂದಾಪುರ, ರಾಜ್ಯ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ, ಮುನಿಯಪ್ಪ ಗೌಡ, ಅಂಬರೀಶ ಮಕಾಶಿ, ರಾಘವೇಂದ್ರ ಮಕಾಶಿ, ಶಿವಪ್ಪ ಹೊಸಮನಿ, ತಿರುಪತಿ ಜೇವರ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.