ಶಾಸಕ ಡಿ.ಎಸ್. ಹೂಲಗೇರಿಯಿಂದ ಬಸವಸಾಗರ ಅಣೆಕಟ್ಟು ಬಾಗಿನ ಅರ್ಪಣೆ

ಲಿಂಗಸುಗೂರು.ಜು.೩೦-ಲಿಂಗಸುಗೂರ ತಾಲೂಕಿನ ಶಾಸಕರಾದ ಡಿ.ಎಸ್.ಹುಲೆಗೇರಿ ಇಂದು ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿಗೆ ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ಎಡದಂಡೆ ಕಾಲುವೆಗಳ ಮುಖಾಂತರ ತಾಲೂಕಿನ ರೈತರುಗಳ ಜಮೀನುಗಳಿಗೆ ನೀರು ಹರಿಸಲು ಬಸವಸಾಗರ ಅಣೆಕಟ್ಟುವಿನಲ್ಲಿ ಗಂಗಾ ಪೂಜೆ ಮಾಡುವ ಮುಖಾಂತರ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರಾದ ಕಾಂಗ್ರೆಸ್ ಪಕ್ಷದ ತಾಲೂಕು ಅದ್ಯೆಕ್ಷರಾದ ಭೂಪನ ಗೌಡ ಕರಡ್ ಕಲ್ ಪುರಸಭೆ ಉಪಾಧ್ಯಕ್ಷ ಎಂಡಿ ರಫೀ. ಕಾಂಗ್ರೆಸ್ ಪಕ್ಷದ ಮುಖಂಡರಾದ್ ಪಾಮಯ್ಯ ಮುರಾರಿ. ಶರಣಪ್ಪ ಮೇಟಿ. ಪರಶುರಾಮ ನಗನೂರ್ ಇನ್ನಿತರ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.