ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲರಿಂದ ಮತದಾನ

ಹುಮನಾಬಾದ್:ಮೇ.7:ಭವ್ಯ ಭಾರತದ ನಿರ್ಮಾಣಕ್ಕೆ, ರಾಷ್ಟ್ರದ ಅಭಿವೃದ್ಧಿಗೆ ಪ್ರಜಾಪ್ರಭುತ್ವದ ಅತ್ಯಂತ
ಮಹತ್ವವಾದ ಲೋಕಸಭಾ ಚುನಾವಣೆಯ ನಿಮಿತ್ತ
ಕ್ಷೇತ್ರದ ಶಾಸಕರಾದ ಡಾ.ಸಿದ್ದಲಿಂಗಪ್ಪ.ಎನ್.ಪಾಟೀಲ ರವರು ಪಟ್ಟಣದ ಜೆರಪೇಟ ಬಡಾವಣೆಯ ಮೌನೇಶ್ವರ ಕಿರಿಯ ಪ್ರಾಥಮಿಕ ಶಾಲೆ ಬೂತ್ ಸಂಖ್ಯೆ 167 ಮತಗಟ್ಟೆ ತೆರಳಿ ಸಹ ಕುಟುಂಬ ಪರಿವಾರದವರೊಂದಿಗೆ ಮತ ಚಲಾವಣೆ ಮಾಡಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಿದೆನು.
ಮತದಾನ ಪ್ರಜಾಪ್ರಭುತ್ವದ ಪರಮೋಚ್ಛ ಅಧಿಕಾರ, ಪ್ರತಿಯೊಬ್ಬರು ಆದಷ್ಟು ಬೇಗನೆ ಮತ ಚಲಾವಣೆ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಸಹೋದರ ಸಂತೋಷ ಪಾಟೀಲ , ಸಹೋದರ ಪುರಸಭೆಯ ಸದಸ್ಯರಾದ ಸುನೀಲ ಪಾಟೀಲ , ಅರ್ಚನಾ ಡಾ.ಸಿದ್ದಲಿಂಗಪ್ಪ ಪಾಟೀಲ್ , ರಾಜೇಶ್ವರಿ ಸಂತೋಷ ಪಾಟೀಲ್ , ರೇಖಾ ಸುನೀಲ ಪಾಟೀಲ , ಸಹೋದರಿ ಮಂಗಲಾ ಮತ ಚಲಾವಣೆ ಮಾಡಿದ್ದರು