ಶಾಸಕ ಡಾ.ಶಿವರಾಜ ಪಾಟೀಲ್ ಹಟಾವೊ ರಾಯಚೂರು ಬಚಾವೊ ಪ್ರತಿಭಟನೆ

ರಾಯಚೂರು, ಮಾ.೧- ೧೦ ಕೋಟಿ ರೂ. ವೆಚ್ಚದಲ್ಲಿ ಮಾವಿನ ಕೆರೆ ಅಭಿವೃದ್ಧಿ ಮಾಡುವುದಾಗಿ ಹೇಳಿ ರಾಯಚೂರು ಜನತೆಗೆ ಮೂಗಿಗೆ ತುಪ್ಪ ಸುರಿದಂತಹ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಟಾವೊ ರಾಯಚೂರು ಬಚಾವೊ ಎಂಬ ವಾಕ್ಯದೊಂದಿಗೆ ಅಂಬೇಡ್ಕರ್ ಸೇನೆ ಮುಖಂಡರು ನಗರದ ಮಾವಿನ ಕೆರೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ವಾಕಿಂಗ್, ಗ್ರಂಥಾಲಯ ಮತ್ತು ಮಕ್ಕಳ ಆಟದ ಮೈದಾನ ಇನ್ನು ಹಲವು ಸೌಲಭ್ಯಗಳನ್ನು ಮಾಡಿಕೊಡುತ್ತೇನೆಂದು ಹೇಳಿ ತಮ್ಮ ಕಾಲಾವಧಿ ಮುಗಿಯಲು ಬಂದರೂ ಸಹ ಇತ್ತಕಡೆ ಶಾಸಕರು ಗಮನಹರಿಸದೇ ಕಾಲಹರಣ ಮಾಡುತ್ತಿದ್ದು, ಮಾವಿನ ಕೆರೆ ಸುತ್ತ ಮುತ್ತಲಿನ ಜನರಿಗೆ ದಿನ ನಿತ್ಯ ಧೂಳು ಗಬ್ಬು ವಾಸನೆ ಸೊಳ್ಳೆಗಳಿಂದ ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ದೂರಿದರು.
ಶಾಲೆಗೆ ಹೋಗು ಬರುವ ಮಕ್ಕಳು ಕೂಡ ಭಯ ಭೀತರಾಗಿದ್ದಾರೆ.ಹುಸಿ ಭರವಸೆಗಳನ್ನು ನೀಡಿ ನಗರದ ಮತದಾರರು ನಿರಾಶದಾಯಕರಾಗಿದ್ದಾರೆ ಇದೆಲ್ಲವನ್ನು ನೋಡಿ ನೋಡದೇ ಇರುವಂತಹ ಡಾ. ಶಿವರಾಜ ಪಾಟೀಲ್ ರವರಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಬಂದೇನಾವಜ್,ಮಹೇಶಕುಮಾರ,ಕೆ.ಕುಮಾರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.