ಶಾಸಕ ಡಾ ಶಾಮನೂರು ಶಿವಶಂಕರಪ್ಪಗೆ ಸನ್ಮಾನ

ದಾವಣಗೆರೆ ನ. 8; ಗುಲ್ಬರ್ಗದ ಶರಣಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಭಾಜನರಾದ ಬಾಪೂಜಿ ಬ್ಯಾಂಕಿನ ಅಧ್ಯಕ್ಷರು, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ನವರನ್ನು ನಗರದ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ,ಹುಬ್ಬಳ್ಳಿ ಯ ಐ .ಈ .ಎಂ .ಎಸ್ .ಬಿ. ಸಂಸ್ಥೆಯಿಂದ ಜೀವಮಾನ ಸಾಧನಾ ಪ್ರಶಸ್ತಿಗೆ ಪಾತ್ರರಾದ ಖ್ಯಾತ ಲೆಕ್ಕಪರಿಶೋಧಕ ಅಥಣಿ ಎಸ್.ವೀರಣ್ಣ  ಹಾಗೂ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಡಾ. ಶಶಿಕಲಾ ಕೃಷ್ಣಮೂರ್ತಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷರು ಮಾಜಿ ಸಚಿವರೂ ಆದ ಎಸ್.ಎಸ್. ಮಲ್ಲಿಕಾರ್ಜುನ, ಬ್ಯಾಂಕಿನ ನಿರ್ದೇಶಕರುಗಳಾದ ಡಾ. ಎಂ .ಜಿ .ಈಶ್ವರಪ್ಪ, ಡಾ. ಬಿ. ಎಸ್ .ರೆಡ್ಡಿ ,ಡಾ .ಶಂಶಾದ್ ಬೇಗಂ ,ಡಾ .ಬಿ ಪೂರ್ಣಿಮಾ, ಡಾ .ಕೆ .ಹನುಮಂತಪ್ಪ ,ಡಾ. ಹೆಚ್. ಶಿವಪ್ಪ ,ಡಾ .ಸಿ .ವೈ. ಸುದರ್ಶನ್ ,ಕೆ.ಬೊಮ್ಮಣ್ಣ,ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ .ವಿ. ಶಿವಶಂಕರ್, ಬಿ.ವಿ .ರವೀಂದ್ರ,ಎಸ್. ಕಲ್ಲಪ್ಪ, ಬಸವರಾಜ ಉತ್ತಂಗಿ, ಮುಂತಾದವರು ಇದ್ದರು.