ಶಾಸಕ ಡಾ.ಕೆ.ಅನ್ನದಾನಿ ಬೆಳ್ಳಿ ಕಿರೀಟ ಉಡುಗೊರೆ ನೀಡಿ ಸನ್ಮಾನ

ರಾಯಚೂರು,ಜ.೧೩- ಜಿಲ್ಲಾ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದಂತಹ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ ಅವರಿಂದ ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಬಾಬು ದಿನ್ನಿ ಗ್ರಾಮಾಂತರ ಅಧ್ಯಕ್ಷರಾದ ತಿಮ್ಮಪ್ಪ ಮಹೇಶ್ ಕುಮಾರ್ ರಾಜೇಶ್ ಪಾರ್ಥಸಾರಥಿ ಕುಮಾರಸ್ವಾಮಿ ವೆಂಕಟೇಶ್ ಅರೋಲಿಕರ್ ರಾಮರೆಡ್ಡಿ ಕೆ ಸಂತೋಷ್ ಕೆ.ಆಂಜನೇಯ, ಶರಣಪ್ಪ ಮೇತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.