ಶಾಸಕ ಡಾ.ಅವಿನಾಶ ಜಾಧವಗೆ ಮಂತ್ರಿ ಸ್ಥಾನನೀಡಿ

ಚಿಂಚೋಳಿ,ಜ.13- ಯುವ ಶಾಸಕರಾದ ಡಾ. ಅವಿನಾಶ ಜಾಧವ್ ಅವರಿಗೆ ಸಚಿವ ಸ್ಥಾನ ಇಲ್ಲವೇ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ತಾಲೂಕಿನ ಬಿಜೆಪಿ ಪಕ್ಷದ ವಕ್ತಾರರಾದ ಶ್ರೀಮಂತ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮೊದಲ ಹೆಜ್ಜೆ ಇಟ್ಟವರು ಡಾ. ಜಾಧವ್ ಕುಟುಂಬ ಹೀಗಾಘಿ ಈ ಕುಟುಂಬಕ್ಕೆ ಸೂಕ್ತ ಸ್ಥಾನಮಾನ ನೀಡಬೇಕು ಎಂದ ಅವರು, ಮುಖ್ಯಮಂತ್ರಿಯಾದ ಬಿ ಎಸ್ ಯಡಿಯೂರಪ್ಪ ನವರ ಗರಡಿಯಲ್ಲಿ ಪಳಗಿರುವ ಶಾಸಕ ಡಾ ಅವಿನಾಶ್ ಜಾಧವ್ ರವರಿಗೆ ಮಂತ್ರಿ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಆದರು ನಿಡಿದರೆ ಹಿಂದುಳಿದ ಈ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅನುಕೂಲವಾಗಲಿದ ಎಂದು ಅವರು ಹೇಳಿದ್ಧಾರೆ.