ಶಾಸಕ ಡಾ.ಅಜಯಸಿಂಗ್ ಶೋಷಿತರ ಕ್ಷಮೆ ಕೇಳಲಿ: ನಿಜಲಿಂಗ ದೊಡ್ಮನಿ

ಕಲಬುರಗಿ.ಸೆ.14: ವೀರಶೈವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ತಾನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎನ್ನುವ ಭರವಸೆ ನೀಡಿದ ಶಾಸಕ ಡಾ.ಅಜಯಸಿಂಗ್ ಅವರು ರಾಜ್ಯದ ಶೋಷಿತರ ಕ್ಷಮೆ ಕೇಳಬೇಕು ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಜನಜಾಗ್ರತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಶಾಸಕ ಡಾ.ಅಜಯಸಿಂಗ್ ಅವರ ಮನೆಯನ್ನು ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಬೇಡ ಜಂಗಮರು ಮಾಂಸಹಾರಿಗಳಾಗಿದ್ದುˌ ಬಹುತೇಕರು ಆಂಧ್ರ ಮೂಲದವರಾಗಿದ್ದಾರೆ. ಬೇಡ ಜಂಗಮರು ಅಷ್ರ್ಪಶ್ಯರ ಗುರುಗಳಾಗಿದ್ದಾರೆ. ಇವು ಯಾವ ಪರಂಪರೆಯೂ ಇಲ್ಲದ ವೀರಶೈವರು ತಾವು ಬೇಡ ಜಂಗಮರು ಎಂದು ನಕಲಿ ಪ್ರಮಾಣ ಪತ್ರ ಪಡೆಯುತ್ತಿರುವುದು ಖಂಡನೀಯ ಎಂದರು.

ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಕುಡಚಿ ಶಾಸಕ ಪಿ.ರಾಜೀವˌ ಸಚಿವ ಗೋವಿಂದ ಕಾರಜೋಳ ಅವರು ವೀರಶೈವರು ಬೇಡ ಜಂಗಮರಲ್ಲ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬಾರದು ಎಂದು ಹೇಳಿದ್ದಾರೆ.

ಇμÉ್ಟಲ್ಲ ಬೆಳವಣಿಗೆ ನಡೆಯುತ್ತಿರುವಾಗ ಸರಕಾರದ ವಿಧಾನಸಭೆಯ ಮುಖ್ಯಸಚೇತಕ ಡಾ.ಅಜಯಸಿಂಗ್ ವೀರಶೈವರನ್ನು ಬೆಂಬಲಿಸಿ ಮಾತನಾಡಿರುವುದು ಖಂಡನೀಯ. ಶಾಸಕರು ರಾಜ್ಯದ ಪರಿಶಿಷ್ಟರ ಕ್ಷೇಮೆ ಕೇಳದೇ ಇದ್ದರೆ ಅವರ ವಿರುದ್ಧ ತಾಲ್ಲೂಕಿನ ಬಿಳವಾರˌ ನಾಗರಹಳ್ಳಿˌ ಯಡ್ರಾಮಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯಾಧ್ಯಕ್ಷ ಗುರಣ್ಣ ಐನಾಪುರˌ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಶಿವಶಂಕರˌ ಮಲ್ಲಿಕಾರ್ಜುನ ಬರ್ಮಾˌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿˌ ತಾಲ್ಲೂಕಾಧ್ಯಕ್ಷ ಕ್ರಷ್ಣ ಕುಶಾಳಕರˌ ಸೀತಾರಾಮ ಚವ್ಹಾಣˌ ನಾಗೇಶ ಗೊಬ್ಬೂರˌ ಶಿವಾನಂದ ಸಿಂಗೆˌ ಹಣಮಂತ ಭಜೇಂತ್ರಿˌ ಮನೋಜ ರಾಠೋಡˌಅರ್ಜುನ ಬೇಲೂರˌ ಸಂಗೀತಾ ದೋತ್ರೆˌ ರಾಧಾ ಸೇರಿದಂತೆ ಇತರರು ಇದ್ದರು.