ಶಾಸಕ ಡಾಕ್ಟರ್ ಅಜಯ್ ಸಿಂಗರವರಿಗೆ ದಲಿತ ಸಂಘಟನೆಗಳ ಮನವಿ

ಜೇವರ್ಗಿ:ನ.22: ತಾಲೂಕಿನ ದಲಿತ ಸಂಘಟನೆಗಳ ಮುಖಂಡರೊಂದಿಗೆ ಅವಾಚ್ಯ ಪದಗಳನ್ನು ಬಳಸಿದ ಪಿಎಸ್‍ಐ ಸಂಗಮೇಶ್ ಅಂಗಡಿಯವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು ಜೇವರ್ಗಿ ಮತ್ತು ಕಟ್ಟಿಸಂಗಾವಿಯ ರಾಷ್ಟ್ರೀಯ ಹೆದ್ದಾರಿಯಲಿರುವ ಸರ್ಕಿಟ್ ಹೌಸ್ ನಲ್ಲಿ ಕಲ್ಯಾಣ ಮಂಟಪ ಲೋಕಾರ್ಪಣೆ ಮತ್ತು ಉಚಿತವಾಗಿ ಸಾಮೂಹಿಕ ವಿವಾಹ ಹಾಗೂ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ರವರ ಹುಟ್ಟು ಹಬ್ಬದ ನಿಮಿತ್ಯವಾಗಿ ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ರವರಿಗೆ ತಾಲೂಕಿನ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡರಾದ ಭೀಮರಾಯ ನಗನೂರ್ ಮಲ್ಲಣ್ಣ ಕೊಡಚಿ ದೌಲಪ್ಪ ಮದನ್ ರವಿ ಕುಳಗೇರಿ ಶ್ರೀ ಹರಿ ಕರ್ಕಿಹಳ್ಳಿ ಶರಣಬಸಪ್ಪ ರೇವನೂರ ಮಹೇಶ್ ಕೋಕಿಲೆ ಸಿದ್ದರಾಮ ಕಟ್ಟಿ ಭಾಗಣ್ಣ ಸಿದ್ದನಾಳ ಭೀಮರಾಯ ಬಳಬಟ್ಟಿ ಸಿದ್ದು ಜನಿವಾರ ಭಾಗಣ್ಣ ಕಟ್ಟಿ ಸೇರಿದಂತೆ ಅನೇಕರು ಇದ್ದರು.