ಶಾಸಕ ಜಿಟಿಡಿಗೆ ಜೆಡಿಎಎಸ್ ಅನಿವಾರ್ಯ

ಮೈಸೂರು,ಮಾ.22:- ಶಾಸಕ ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಅನಿವಾರ್ಯ ಎಂದು ಮಾಜಿ ಸಂಸದ ಎಲ್ ಆರ್ ಶಿವರಾ ಮೇಗೌಡ ಟಾಂಗ್ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಾಸಕ ಜಿ.ಟಿ.ದೇವೆಗೌಡರಿಗೆ ಜೆಡಿಎಸ್ ಅನಿವಾರ್ಯ. ಜೆಡಿಎಸ್ ಗೂ ಜಿ.ಟಿ.ದೇವೇಗೌಡರು ಅನಿವಾರ್ಯ. ಸಿದ್ದರಾಮಯ್ಯ ಇರೋವರೆಗೂ ಕಾಂಗ್ರೆಸ್ ನಲ್ಲಿ ಅವರಿಗೆ ಅವಕಾಶ ಇಲ್ಲ. ಈಗಾಗಲೇ ಅವರು ಬಿಜೆಪಿಗೆ ಹೋಗಿ ಬಂದಿದ್ದಾರೆ ಎಂದರು.
ಮತ್ತೆ ಕೊರೋನಾ ಬಂದ ಕಾರಣ ಸಿಡಿ ಪ್ರಕರಣ ಮುಚ್ಚಿಕೊಂಡಿದೆ. ಬಿಜೆಪಿ ನಾಯಕರೇ ಹೇಳಿರುವಂತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸತ್ಯಾಸತ್ಯತೆ ಹೊರಬರಲು ಕೂಲಂಕುಶವಾಗಿ ಸಮಗ್ರ ತನಿಖೆಯಾಗಬೇಕು. ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದಂತೆ ತನಿಖೆ ಹಳ್ಳ ಹಿಡಿಯುತ್ತಿದೆ ಎಂದರು.
ಬಿಜೆಪಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಕೊರೋನಾ ಎರಡನೇ ಅಲೆ ನೋಡಿದರೆ ಮತ್ತೆ ಆತಂಕ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಇನ್ನೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ನಮ್ಮ ಪಕ್ಷದ ಹಣೆ ಬರಹವೇ ಇಷ್ಟು. 2018 ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂದರೆ ನಗುತ್ತಿದ್ದರು. ಕುಮಾರಸ್ವಾಮಿ ಹುಡುಕಿಕೊಂಡು ಬರುವ ಸ್ಥಿತಿ ಬಂತು. ಈಗಲೂ ಅಷ್ಟೇ 2023 ಕ್ಕೆ ಮತ್ತೆ ಕುಮಾರಸ್ವಾಮಿ ಕಾಲು ಹಿಡಿಯುವ ಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದರು.
ನಾಗಮಂಗಲದಲ್ಲಿ ಈ ಬಾರಿ ರಂಗದಲ್ಲಿ ಕುಣಿ ಯೋದು ನಾನೇ. ಶಾಸಕ ಸುರೇಶ್‍ಗೌಡರಿಗೆ ಪರ್ಮ ನೆಂಟಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಜೆಡಿಎಸ್‍ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಸುರೇಶ್‍ಗೌಡರನ್ನು ಎಂಎಲ್‍ಸಿ ಅಥವಾ ಎಂಪಿಗೆ ಕಳಿಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದರು.