ಶಾಸಕ ಗುತ್ತೇದಾರ ಪ್ರಭಾವದಿಂದ ತಾಲ್ಲೂಕಿನ ಕಳಪೆ ಮಟ್ಟದ ಕಾಮಗಾರಿಗಳು : ಬಿ.ಆರ್. ಆರೋಪ

ಆಳಂದ:ನ.9:ಶಾಸಕ ಸುಭಾಷ ಆರ್. ಗುತ್ತೇದಾರ ಅವರ ಪ್ರಭಾವ ದಿಂದ ತಾಲ್ಲೂಕಿನಲ್ಲಿ ಪ್ರತಿ ಒಂದು ಹಂತದಲ್ಲಿ ಕಳಪ ಮಟ್ಟದ ಕಾಮಗಾರಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.

ಸೋಮುವಾರ ತಾಲ್ಲೂಕಿನ ಗಾಣಗಾಪೂರ -ಧಂಗಾಪುರ ವರೆಗೆ ಪಿಎಂಜಿಎಸವಾಯ್ ಯೋಜನೆ ಅಡಿ ರಸ್ತೆ ಕಾಮಗಾರಿ ಪರಿಶೀಲಿಸಿ ಧಂಗಾಪೂರ ದಿಂದ ನಿಂಬರ್ಗಾ ವರೆಗೆ 6.57 ಕೋಟಿ, ರೂ, ಗಾಣಗಾಪುರ ಕ್ರಾಸ ದಿಂದ ನಿಂಬರ್ಗಾ 5.57 ಕೋಟಿ ರೂ. ಖರ್ಚಿನದಲ್ಲಿ ರಸ್ತೆ ನಿರ್ಮಿಸಲಾಗಿದೆ. ಕಾಮಗಾರಿ ಗುತ್ತಿಗೆದಾರರ ಶಾಸಕರ ಆಪ್ತ ಸಂಬಂಧಿ ಅವರು ಕಾಮಗಾರಿ ಮಾಡಿದ್ದು. ರಸ್ತೆಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ. ರಸ್ತೆ ನಿರ್ಮಿಸದ ಬೆನ್ನಲೇ ತೆಗ್ಗೆಗಳು ಬಿದ್ದಿವೆ. ಕ್ರೀಯಾ ಯೋಜನೆ ಅನುಗುಣವಾಗಿ ಮಾಡಬೇಕಾದ ರಸ್ತೆ ನಿರ್ಮಾಣ ವಾಗುತ್ತಿಲ್ಲ. ಹಳೆ ಸೇತುವೆಗಳಿಗೆ ಸುಣ್ಣ ಬಳಸಿದ್ದಾರೆ. ಧಂಗಾಪೂರದಲ್ಲಿ ಕ್ರೀಯಾ ಯೋಜನೆ ಇದ್ದರೂ ಕೂಡಾ ಸೇತುವೆ ನಿರ್ಮಾಣಗೊಂಡಿಲ್ಲಾ . ರೈತರ ಹೋಲಗಳಿಗೆ ಗ್ರಾಮದ ಒಳಗೆ ಪ್ರವೇಶಿಸಿಲು ಒಳ ಮೋರಿಗಳು ನಿರ್ಮಿಸಿರುವುದಿಲ್ಲ. ಸ್ಥಳದಲ್ಲಿ ಸಂಬಂಧ ಪಟ್ಟ ಅಧಿಕಾರಿ ಪಟ್ನೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಕೈ ಬಿಟ್ಟ ಸೇತುವೆಗಳು ಗುಣಮಟ್ಟದ ರಸ್ತೆ ನಿರ್ಮಿಸದೇ ಹೋದರೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಧಂಗಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಶಾರದಾ ಮೇಲಕೇರಿ, ನಿಂಬಗಾ ಗ್ರಾಮ ಪಂಚಾಯತ ಅಧ್ಯಕ್ಷ ಸಾತಣ್ಣಾ ಮಂಟಗಿ, ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ಗ್ರಾಮ ಪಂಚಾಯತ ಸದಸ್ಯ ಸಿದ್ಧರಾಮ ಕಲ್ಯಾಣ, ಯಲ್ಲಪ್ಪ ಚಿತಲಿ,ಧಂಗಾಪೂರ ಗ್ರಾಮ ಸುಧಾರಣಾ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಶೇಗಜಿ, ಹಾಗೂ ಮುಖಂಡರಾದ ಆಲೂಗೌಡ ಪಾಟೀಲ್, ಶ್ರೀಮಂತ ವಾಗ್ದರಗಿ, ಈರಣ್ಣಾ ನಾಗಶಟ್ಟಿ, ಗುರು ಕಾಮಗೋಳ, ಕೃಷ್ಣಾ ಕಾಂಬಳೆ, ಕಲ್ಯಾಣಿ ಪಡಸಾವಳಗಿ ಇತರರು ಜೊತೆಯಲ್ಲಿ ಇದ್ದರು.