ಶಾಸಕ ಗವಿಯಪ್ಪ ಮತ್ತೆ ಮತ್ತೆ ನಿರ್ಲಕ್ಷ್ಯವೇ ?


ಸಂಜೆವಾ|ಣಿ ವಾರ್ತೆ
ಹೊಸಪೇಟೆ ಜ16: ಫೆಬ್ರುವರಿ 2 ರಿಂದ ಆರಂಭವಾಗಲಿರುವ ಹಂಪಿ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಲಾಂಛನ ಕೂಡಾ ಅನಾವರಣಗೊಂಡಿದೆ. ಬೆಂಗಳೂರಿನಲ್ಲೇ ಇದ್ದ ಸ್ಥಳೀಯ ಶಾಸಕ ಎಚ್‌.ಆರ್‌.ಗವಿಯಪ್ಪ ಅವರನ್ನು ಈ ಕಾರ್ಯಕ್ರಮದಿಂದ ದೂರ ಇಟ್ಟದ್ದು ಅಚ್ಚರಿ ಮೂಡಿಸುವ ಮೂಲಕ ಸ್ಥ|ಳೀಯ ಶಾಸಕ ಗವಿಯಪ್ಪ ಮತ್ತೆ ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೇಯೆ ಎಂಬ ಆತಂಕ ಅವರ ಅಭಿಮಾನಿಗಳಲ್ಲಿ ಮ|ಊಡಲಾರಂಭಿಸಿದೆ.
ಈ ಹಿಂದೆ ಸ್ಥಳೀಯ ಶಾಸಕರು, ಸ್ಥಳೀಯ ಜನರನ್ನು ಕಡೆಗಣಿಸಿದಾಗ ಹಂಪಿ ಉತ್ಸವ ಜನರೇ ಇಲ್ಲದೆ ಕಳೆಗುಂದಿದ ನಿದರ್ಶನಗಳು ಕಣ್ಣ ಮುಂದೆ ಇದ್ದರೂ ಮತ್ತೆ ಅದೇ ತಪ್ಪನ್ನು ಮಾಡಲಾಗುತ್ತಿದೆಯೇ ಎಂಬ ಸಂಶಯ ಕಾಡತೊಡಗಿದೆ.
‘ಶಾಸಕ ಗವಿಯಪ್ಪ ಅವರು ಶನಿವಾರ ಬೆಂಗಳೂರಿನಲ್ಲೇ ಇದ್ದರು. ಹಂಪಿ ಉತ್ಸವ, ಅನುದಾನ ಪೂರೈಕೆ ಸಹಿತ ಹಲವು ವಿಚಾರಗಳ ಬಗ್ಗೆ ಮಾತನಾಡಲಿಕ್ಕಿದೆ, ಸಿಎಂ ಜತೆಗೂ ಸಮಾಲೋಚನೆ ಇದೆ ಎಂಬ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ಶಾಸಕರಿಗೆ ತಿಳಿಸಿದ್ದರು. ಆದರೆ ಲಾಂಛನ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಮಾತ್ರ ಕರೆಯಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಲಾಂಛನ ಅನಾವರಣಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇದು ಶಾಸಕರಿಗೆ ಮಾಡಿದ ಅವಮಾನ ಎಂದೇ ಭಾವಿಸಬೇಕಾಗುತ್ತದೆ’ ಎಂದು ಶಾಸಕರ ಆಪ್ತರೊಬ್ಬರು ತಿಳಿಸಿದರು.
‘ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕರು, ನಟಿಯರು, ಸಿನಿಮಾ ನಿರ್ದೇಶಕರು, ಸಚಿವರನ್ನು ಕರೆಸಲಾಗಿದೆ. ಸ್ಥಳೀಯ ಶಾಸಕರನ್ನು ಏಕೆ ಕರೆಸಲಿಲ್ಲ?’ ಎಂದು ಅವರು ಪ್ರಶ್ನಿಸಿದರು.  ಈ ಹಿಂದೆ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದ ವೇಳೆಯೂ ಇದೇ ರೀತಿ ಆಗಿತ್ತು. ಹಂಪಿ ಉತ್ಸವದಲ್ಲಿ ರಾಜ್ಯಮಟ್ಟದ ಶಿಷ್ಟಾಚಾರ ಎಂಬ ಕಾರಣ ಒಡ್ಡಿ ಸ್ಥಳೀಯ ಶಾಸಕರ ಬ್ಯಾನರ್‌ಗಳಿಗೆ ಸಂಪೂರ್ಣ ನಿಷೇಧ ಹೇರಿದ್ದರು. ಜನರನ್ನು ಸಹ ಕಡೆಗಣಿಸಿದ್ದರು. ಆಗ ಹಂಪಿ ಉತ್ಸವ ಪ್ರೇಕ್ಷಕರಿಲ್ಲದೆ ಕಳಾಹೀನವಾಗಿತ್ತು. ಆನಂದ್ ಸಿಂಗ್ ಅವರು ಸಚಿವರಾಗಿದ್ದರೂ ಇದೇ ರೀತಿ ಆಗಿತ್ತು ಎಂದು ಹಲವರು ನೆನಪಿಸಿಕೊಂಡಿದ್ದಾರೆ.
2ನೇ ಬಾರಿ ಕಡೆಗಣನೆ: ಶಾಸಕ ಗವಿಯಪ್ಪ ಅವರಿಗೆ ಹಂಪಿ ಉತ್ಸವ ವಿಚಾರದಲ್ಲಿ ಎರಡನೇ ಬಾರಿಗೆ ಆಗಿರುವ ಅವಮಾನ ಇದು ಎಂದು ಹೇಳಲಾಗುತ್ತಿದೆ. ಈಚೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ನೇತೃತ್ವದಲ್ಲಿ ಹಂಪಿಯಲ್ಲಿ ಸಿದ್ಧತೆ ನೋಡಿ, ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಹರಿಯಬಿಟ್ಟಿದ್ದರು. ತಮ್ಮನ್ನು ಕಡೆಗಣಿಸಿ ಹಂಪಿ ಉತ್ವವದ ಸಿದ್ಧತೆ ಆರಂಭಿಸಿದ್ದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು ಹಿಂದೆ ಕೆಲ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ಇದೆ ರೀತಿಯ ನಿರ್ಲಕ್ಕ ಮಾಡಲಾಗಿದೆ ಹೊರಗಿನವರು ಪ್ರಭಾಲ್ಯ ಮೆರೆಯುತ್ತಿದ್ದಾರೆ ಎಂದು ಶಾಸಕರು ಸಿಟ್ಟಾಗಿದ್ದರು ಎಂದು ಮುಖ್ಯಮಂತ್ರಿಗಳೇ ಸಮಾಧಾನ ಮಾಡಿದ್ದು ನೆನಪಿರುವಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಮೀರ ಅಹಮದ್ ಖಾನ ಜಿಲ್ಲಾ ಸಮಿತಿ ಸೇರಿದಂತೆ ಸ್ಥಳಿಯರ ನಿರ್ಲಕ್ಷ್ಯ ಮುಂದುವರೆಸಿದ್ದಾರೆ ಎನ್ನುವುದನ್ನು ಸ್ಥಳೀಯ ನಾಯರು ಸಹ ಒಪ್ಪಿಕೊಳ್ಳುತ್ತಿದ್ದು ಶಾಸಕರ ಮುನಿಸಿಗೂ ಕಾರಣವಾಗಿದೆ ಇಂತಹ ನಡುವಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀಳುತ್ತವೆ ಎನ್ನುತ್ತಾರೆ ಕಾರ್ಯಕರ್ತರು.