ಶಾಸಕ ಗಣೇಶ್ ಪರ ಮುಂಡ್ರಿಗಿ ನಾಗರಾಜ್ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.08: ಜಿಲ್ಲೆಯ  ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ  ಜೆ. ಎನ್. ಗಣೇಶ್ ಪರ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ. ಮುಂಡ್ರಿಗಿ ನಾಗರಾಜ್ ಕ್ಷೇತ್ರದ  ಹಲವು ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸಿದರು. 
ಜನಾಶಿರ್ವಾದ ಭೇಟಿ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಲಕ್ಷ್ಮಿನಗರ ಕ್ಯಾಂಪ್, ಕೋಳೂರು ಕ್ರಾಸ್ ಇಂದ್ರನಗರ, ಎಮ್ಮಿಗನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ  ಶಾಸಕ ಜೆ.ಎನ್. ಗಣೇಶ್ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ  ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಕರ ಪತ್ರ  ಹಂಚಲಾಯ್ತು.
ಈ ಸಂಧರ್ಭದಲ್ಲಿ ಪಕ್ಷದ ಮಯಖಂಡರುಗಳಾದ ಎಲ್. ಮಾರೆಣ್ಣ, ಸಣ್ಣ ನಾಗರಾಜ, ಫೋಟೊರಾಜ, ನಾಗರಾಜ