ಶಾಸಕ ಕೆ.ಶಿವನಗೌಡ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ

ದೇವದುರ್ಗ,ಮಾ.೦೭- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಜನಪರ ಹಾಗೂ ಅಭಿವೃದ್ಧಿ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿವೆ. ಡಬಲ್ ಇಂಜಿನ್ ಸರ್ಕಾರದ ಯೋಜನೆಗಳು ಜನರ ಮನಗೆದ್ದಿವೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಅಭಿವೃದ್ಧಿ ಕಾರ್ಯ ಮೆಚ್ಚಿ ಬೇರೆ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ನನಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿಬಂದಂತಾಗಿದೆ. ಕ್ಷೇತ್ರಕ್ಕೆ ನನ್ನ ಶಕ್ತಿಮೀರಿ ಅನುದಾನ ತಂದಿದ್ದೇನೆ. ಇನ್ನು ಯಾವುದಾದರೆ ಸಮಸ್ಯೆಗಳಿದ್ದರೆ ಜನರು ನನ್ನ ಬಳಿ ನೇರವಾಗಿ ಬಂದು ಅರ್ಜಿ ಸಲ್ಲಿಸಿದರೆ ಸ್ಥಳದಲ್ಲೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ವಿಶ್ವಗುರುಅನ್ನಾಗಿ ಮಾಡುತ್ತಿದ್ದು, ಕರೊನಾ ಸಂದರ್ಭದಲ್ಲಿ ಜಗತ್ತಿಗೆ ಲಸಿಕೆ ನೀಡಿದ್ದು, ಜಾಗತಿಕ ಬಿಕ್ಕಟ್ಟಿಗೆ ಭಾರತವೇ ಪರಿಹಾರ ಎಂದು ಶ್ರೀಮಂತ ದೇಶಗಳು ಹೇಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನರ ಮೀಸಲು ಹೆಚ್ಚಳ ಮಾಡಿ ಯಾರೂ ಮಾಡದ ಕೆಲಸ ಮಾಡಿದೆ. ಸಿಎಂ ಉತ್ತಮ ಬಜೆಟ್ ಮಂಡಿಸಿದ್ದಾರೆ. ಹೀಗಾಗಿಯೇ ಬಿಜೆಪಿ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿವೆ ಎಂದು ಹೇಳಿದರು.
ಗಬ್ಬೂರು, ಮಸರಕಲ್, ರಾಮದುರ್ಗ, ಗುಂಟ್ರಾಳ, ಚಿಂತಲಕುಂಟ ನೂರಾರು ಯುವಕರು ಬಿಜೆಪಿ ಸೇರ್ಪಡೆಯಾದರು. ಮುಖಂಡರಾದ ಲಕ್ಷ್ಮಣ ಅಬಕಾರಿ, ರಂಗನಾಥ ಅಬಕಾರಿ, ನಾಗರಾಜ ಅಬಕಾರಿ, ಚೆನ್ನಪ್ಪ ಸಾಹು ಬಳೆ, ಗುರು ಪಾಟೀಲ್ ಮಸರಕಲ್, ಬಸವರಾಜ ಕಸನದೊಡ್ಡಿ, ಬಸವರಾಜ ಬೆಳಗುಂದಿ, ವೈಜನಾಥ ಸಾಹು ಬಳೆ, ಗ್ರಾಪಂ ಸದಸ್ಯರಾದ ಮಹೇಶ ನಾಯಕ, ಬಸವರಾಜ ಜಯಂ, ಲಕ್ಷ್ಮಣ ಅಯ್ಯಾಳ, ದೇವು ದೊರೆ, ಶೇಖರ್ ನಾಯಕ ದೇವರಗುಡ್ಡಿ ಇತರರಿದ್ದರು.