ಶಾಸಕ ಕೆ.ಶಿವನಗೌಡ ನಾಯಕರಿಗೆ ಲಾಭದಾಯಕ ಸರಕಾರವಾಗಿದೆ-ಸಿ.ಆರ್.ನಾಯಕ

ಗಬ್ಬೂರು.ಜು.೩೦- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾನ್ಯ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷದ ಸಾಧನೆ ಬಿಜೆಪಿ ಶಾಸಕರ ಸಂತೋಷ ಸಂಭ್ರಮದ ದಿನವಾಗಿರಬಹುದು ಆದರೆ ಈ ರಾಜ್ಯದ ಜನತೆಗೆ ಕೆಟ್ಟ ಸಂದೇಶದ ಸರ್ಕಾರವಾಗಿದೆ ಮತ್ತು ದೇವದುರ್ಗ ಕ್ಷೇತ್ರದ ಶಾಸಕ ಕೆ ಶಿವನಗೌಡ ನಾಯಕನಿಗೆ ಲಾಭದಾಯಕ ಸರ್ಕಾರವಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಸಿ.ಆರ್. ನಾಯಕ ಹೇಮನೂರು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯಾಕೆಂದರೆ ತನ್ನ ಸ್ವಂತ ಗ್ರಾಮವನ್ನು ಅರಕೆರ ತಾಲೂಕು ಘೋಷಣೆ ಮಾಡಿಕೊಂಡಿರುವುದು ನಾಚಿಕೆಗೇಡಿ ಸಂಗಾತಿ ಆಗಿರುತ್ತದೆ ಕ್ಷೇತ್ರದ ಶಾಸಕನಾದ ಮೇಲೆ ಈ ಕ್ಷೇತ್ರದ ರೈತರ ಪರ ಚಿಂತೆ ಮತ್ತು ಈ ಕ್ಷೇತ್ರದ ಅಭಿವೃದ್ಧಿಪರ ಕೆಲಸ ಮಾಡಬೇಕು ಅದನ್ನು ಬಿಟ್ಟು ತನ್ನ ಸ್ವಾರ್ಥ ಸುಖಕಾಗಿ ತನ್ನ ಮುಂದಿನ ಭವಿಷ್ಯಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಟುಂಬ ರಾಜಕಾರಣಿಗಳಾಗಿರುವುದರಿಂದ ದೇವದುರ್ಗ ತಾಲೂಕನ್ನು ವಿಭಜನೆ ಮಾಡಿದ ಈ ದೇವದುರ್ಗ ಕ್ಷೇತ್ರದ ಶಾಸಕ ಎಂತ ದುರ್ಬುದ್ಧಿ ಶಾಸಕ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎ ವೆಂಕಟೇಶ್ ನಾಯಕನ ಮಕ್ಕಳಿಗೂ ಕೂಡ ಈ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ. ಈ ಕ್ಷೇತ್ರ ಅನ್ನ ನೀರು ಕೊಟ್ಟಂತ ಕ್ಷೇತ್ರ ಅದನ್ನು ಮರೆತು ಬಿಜೆಪಿ ಮತ್ತು ಕಾಂಗ್ರೆಸ್ ಕುಟುಂಬ ರಾಜಕಾರಣಿಗಳು ಈಗ ಈ ಕ್ಷೇತ್ರಕ್ಕೆ ಕನ್ನ ಹಾಕಲು ಹೊರಟಿದ್ದಾರೆ ಮತ್ತೊಂದು ತಾಲೂಕ ರಚನೆ ಮಾಡಿ ಶಾಸಕ ಕೆ ಶಿವನಗೌಡ ನಾಯಕ ತಮ್ಮ ಸ್ವಂತ ಗ್ರಾಮವನ್ನು ಅರಕೆರ ತಾಲೂಕು ಮಾಡಿಕೊಳ್ಳಲು ಬಿಜೆಪಿ ಶಾಸಕನಾದ ಕೆ ಶಿವನಗೌಡ ನಾಯಕ ಕ್ಯಾಬಿನೆಟ್ ದರ್ಜೆಯಲ್ಲಿ ಎರಡುವರೆ ವರ್ಷಗಳಿಂದ ಲಾಕ್ಡೌನ್ ಇದ್ದಾಗಲೂ ಕೂಡ ತಾಲೂಕು ಘೋಷಣೆ ಮಾಡಿಕೊಂಡಿದ್ದಾನೆ.
ಆದರೆ ಇದು ಎಂಥ ಭ್ರಷ್ಟ ಸರ್ಕಾರ ಎನ್ನುವುದಕ್ಕೆ ಉದಾಹರಣೆಗೆ ಇದೊಂದೇ ಸಾಕ್ಷಿ. ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಒಂದು ವರ್ಷದ ಸಾಧನೆಗೆ ಒಂದು ತಾಲೂಕು ಘೋಷಣೆ ಮಾಡಬೇಕಾದರೆ ಈ ಕ್ಷೇತ್ರದ ಜನರ ಅಭಿಪ್ರಾಯವೂ ಕೂಡ ಸಂಗ್ರಹಿಸಬೇಕು ಒಬ್ಬ ಶಾಸಕನಾ ಮಾತು ಕೇಳಿ ಮಾನ್ಯ ಮುಖ್ಯಮಂತ್ರಿಗಳೇ ನೀನೊಬ್ಬ ಸಂಪೂರ್ಣ ಜ್ಞಾನ ಸಮೃದ್ಧಿ ಇಲ್ಲದ ಮುಖ್ಯಮಂತ್ರಿ ಎನ್ನುವುದಕ್ಕೆ ಇದೊಂದೇ ಉದಾಹರಣೆ ಸಾಕು.
ದೇವದುರ್ಗ ತಾಲೂಕಿನ ಜನತೆಗೆ ಬಿಜೆಪಿ ಸರ್ಕಾರ ವಿಷ ಕೊಟ್ಟಿದೆ ಆದರೆ ನನ್ನ ಕ್ಷೇತ್ರದ ಮತದಾರರು ಮೌನವಾಗಿದ್ದಾರೆ ಬಿಜೆಪಿ ಸರ್ಕಾರ ಶಾಸಕಾಂಗ ಮತ್ತು ಕ್ಯಾಬಿನೆಟ್ ದರ್ಜೆಯ ಮತ್ತು ಈ ಕ್ಷೇತ್ರದ ಶಾಸಕನ ವಿರುದ್ಧ ನಮ್ಮ ಕ್ಷೇತ್ರದ ಜನರು ಮನಸ್ಸು ಮಾಡಿದರೆ ನ್ಯಾಯಾಂಗದ ಮರೆ ಹೋದರೆ ಅರಿಕೇರ ತಾಲೂಕು ಘೋಷಣೆ ಮಾಡಿರುವುದನ್ನು ಸರ್ಕಾರದ ವಿರುದ್ಧ ನಿಲ್ಲಿಸಬಹುದು.
ಹೈಕೋರ್ಟ್ ಮೆಟ್ಟಲು ಹತ್ತಿ ಬಿಜೆಪಿ ಸರ್ಕಾರದ ವಿರುದ್ಧ ಜನ ವಿರೋಧಿ ಸರ್ಕಾರದ ವಿರುದ್ಧ ಹೈಕೋರ್ಟ್ ನಿಂದ ಒಬ್ಬ ವಕೀಲನ ನೇಮಕ ಮಾಡಿ ಸ್ಟೇಟ್ ತಂದು ಆಡಳಿತ ಇರುವ ಸರ್ಕಾರದ ವಿರುದ್ಧ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಸರ್ಕಾರದ ಆಡಳಿತ ವರ್ಗಕ್ಕೆ ಸ್ಟೇಟ್ ಅಪಿಲ್ ಮಾಡಿದ ಕಾಪಿಯನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸಿದರೆ ನಿಲ್ಲುತ್ತದೆ ಅದಕ್ಕೆ ನಮ್ಮ ಕ್ಷೇತ್ರದ ಮತದಾರ ಬಂಧುಗಳು ಸಂಪೂರ್ಣ ಮನಸ್ಸು ಮಾಡಿದರೆ ತಾಲೂಕು ಆಗಿರುವುದು ನಿಲ್ಲಿಸುತ್ತೇವೆ ಇಂತ ದುರ್ಬುದ್ಧಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಇದನ್ನು ನಿಲ್ಲಿಸಿ ನೋಡಬಹುದು ನಮ್ಮ ಕ್ಷೇತ್ರದ ಜನರು ಈ ಕ್ಷೇತ್ರವನ್ನು ೨೦ ವರ್ಷವಾದರೂ ಕೂಡ ಅಭಿವೃದ್ಧಿಯಾಗಿಲ್ಲ, ಬಿಜೆಪಿ ಶಾಸಕನ ಮಾತು ಕೇಳಿ ಮಾನ್ಯ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ದರ್ಜೆಯಲ್ಲಿ ಗೆಜೆಟ್ ಪಾಸ್ ಮಾಡಿದ್ದೀರಿ.
ಈ ದೇವದುರ್ಗ ಕ್ಷೇತ್ರದ ಶಾಸಕನಿಗೆ ನಿಜವಾಗಲೂ ರೈತರ ಬಗ್ಗೆ ದೇವದುರ್ಗ ಮತಕ್ಷೇತ್ರದ ಮತದಾರ ಬಂಧುಗಳ ಬಗ್ಗೆ ಕಾಳಜಿ ಇದ್ದರೆ ನಿನ್ನದೇ ಆದಂತಹ ಸಂಪೂರ್ಣ ಬಿಜೆಪಿ ಸರ್ಕಾರವಿದೆ ನಿನ್ನನ್ನು ನಮ್ಮ ಕ್ಷೇತ್ರದ ಜನ ನೆನೆಸುವಂತೆ ಮತ್ತು ನಮ್ಮ ರಾಜ್ಯದ ಜನನ ನನಸುವಂಥ ಕೆಲಸ ಮಾಡಬೇಕಾದರೆ ಸಹಕಾರಿ ಕ್ಷೇತ್ರದ ಸಚಿವರು ಎಸ್ ಟಿ ಸೋಮಶೇಖರ್ ಅವರ ಜೊತೆ ಮಾತನಾಡಿ ಸಹಕಾರಿ ಕ್ಷೇತ್ರದ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಈ ವಿಷಯ ನಿಮ್ಮ ಬಿಜೆಪಿ ಸರ್ಕಾರಕ್ಕೆ ಗಮನಕ್ಕೆ ಬರಲಿಲ್ಲವೇ ಮತ್ತು ಹಿಂದಿನ ಸರ್ಕಾರ ಸಮ್ಮಿಶ್ರ ಸರ್ಕಾರದಲ್ಲಿ ಅವಧಿಯಲ್ಲಿ ಜಾತ್ಯತೀತ ಪಕ್ಷದ ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಈ ರಾಜ್ಯದ ಜನತೆಗೆ ಸಹಕಾರಿ ಕ್ಷೇತ್ರದ ರೈತರ ಬೆಳೆ ಸಾಲ ಮನ್ನಾ ಒಂದು ಲಕ್ಷದವರೆಗೆ ಘೋಷಣೆ ಮಾಡಿದ್ದಾರೆ ಆದರೆ ಬಿಜೆಪಿ ಸಂಪೂರ್ಣ ಸರ್ಕಾರವನ್ನು ಇಟ್ಟುಕೊಂಡು ಈ ರಾಜ್ಯದ ಜನತೆಗೆ ಮತ್ತು ನನ್ನ ದೇವದುರ್ಗ ತಾಲೂಕಿನ ಮತಕ್ಷೇತ್ರದ ಮತದಾರರು ಬಂದುಗಳಿಗೆ ಅನ್ಯಾಯ ಮಾಡಲು ಹೊರಟಿರತಕ್ಕಂತ ದುರ್ಬುದ್ಧಿ ಶಾಸಕ ಕೆ ಶಿವನಗೌಡ ನಾಯಕನಿಗೆ ಮುಂದಿನ ೨೦೨೩ ರ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತಿದ್ದೇವೆ ಈ ಕ್ಷೇತ್ರದ ಮತದಾರ ಬಂಧುಗಳು ಈ ವಿಷಯ ನಿನಗೆ ನೆನಪಿರಲಿ ಈ ರಾಜ್ಯದಲ್ಲಿ ಜಾತ್ಯತೀತ ಜನತಾ ಪಕ್ಷಕ್ಕೆ ರಾಜ್ಯದ ಜನತೆ ಆಶೀರ್ವಾದ ಸಂಪೂರ್ಣ ಸರ್ಕಾರವಾದರೆ ಸಹಕಾರಿ ಕ್ಷೇತ್ರದಲ್ಲಿ ಇರುವಂತ ರೈತರ ಬೆಳೆ ಸಾಲ ಸಂಪೂರ್ಣ ಸಾಲಮನ್ನ ಮಾಡುತ್ತೇವೆ ಅಂತ ಹೇಳಿ ಹೆಮ್ಮೆ ಪಡುತ್ತಿದ್ದೇನೆ ಘಂಟಾಘೋಷವಾಗಿ ಈ ಸಂದರ್ಭದಲ್ಲಿ ನಾನು ಹೇಳಲಿಕ್ಕೆ ಇಷ್ಟಪಡುತ್ತಿದ್ದೇ ಕೆ ಶಿವನಗೌಡ ನಾಯಕನೇ ಈ ಕ್ಷೇತ್ರದ ಜನತೆಗೆ ನೀನು ಒಬ್ಬ ಶಾಸಕನಾಗಿ ಏನು ಮಾಡಬೇಕೆನ್ನುವ ವಿಷಯ ನಿನಗೆ ಗೊತ್ತಿಲ್ಲವೇ ಕ್ಷೇತ್ರಕ್ಕೆ ಬಂದ ಬಜೆಟ್ ನಲ್ಲಿ ಕೊಳ್ಳೆ ಹೊಡೆಯುವುದನ್ನು ಮಾತ್ರ ಗೊತ್ತು ತಾಲೂಕು ಆಡಳಿತ ವರ್ಗ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಮಾತ್ರ ಗೊತ್ತು.
ಕ್ಷೇತ್ರದ ಬೆಳವಣಿಗೆ ವಿಷಯ ನಿನ್ನ ಗಮನಕ್ಕೆ ಬರಲಿಲ್ಲವೇ ಇಡೀ ರಾಜ್ಯ ರೈತರ ಹಿತ ಚಿಂತನೆ ಕಾಪಾಡುವಲ್ಲಿ ನೀನೊಬ್ಬ ಯಶಸ್ವಿ ಶಾಸಕನಾಗಬೇಕು ಎಂದು ಜೆಡಿಎಸ್ ಯುವ ಮುಖಂಡ ಸಿ.ಆರ್.ನಾಯಕ ಹೇಮನೂರು ಕಿಡಿಕಾರಿದರು.