
ಅರಕೇರಾ,ಮಾ.೧೫- ನೂತನ ತಾಲೂಕು ಕೇಂದ್ರಕ್ಕೆ ತಹಸೀಲ್ದಾರರಾಗಿ ಯಲ್ಲಪ್ಪ ಸುಬೇದಾರವರು ನೇಮಕಗೊಂಡಿದ್ದು, ಇಂದು ದೇವದುರ್ಗ ಶಾಸಕ ಕೆ.ಶಿವನಗೌಡನಾಯಕರವರ ನಿವಾಸದಲ್ಲಿ ಶಾಸಕರಿಗೆ ಸನ್ಮಾನಿಸಿ ಅಧಿಕಾರ ತಹಶೀಲ್ದಾರವರು ಅಧಿಕಾರ ಸ್ವೀಕರಿಸಿದರು.
ನಂತರ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರರನ್ನು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪಯಾದವ ಸ್ವಾಗತಿಸಿಕೊಂಡರು.
ಸಂದರ್ಭದಲ್ಲಿ ನಾಡತಹಶೀಲ್ದಾರ ಮನೋಹರನಾಯಕ,ಕಂದಾಯ ಅಧಿಕಾರಿ ಬಸವರಾಜ,ಮಲ್ಲಪ್ಪನಾಯಕ ಜಾಗಟಗಲ್,ಅರುಣಾ ಮುಂತಾದವರು ಉಪಸ್ಥಿತರಿದ್ದರು.