ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಸಚಿವ ಸ್ಥಾನದೊಂದಿಗೆ ಪ್ರಮುಖ ಖಾತೆ ನೀಡಲು ಮನವಿ

ದಾವಣಗೆರೆ. ಮೇ.24; ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭವಾಗಿದೆ ಜಿಲ್ಲೆಯ ಆರು ಕ್ಷೇತ್ರದಲ್ಲಿ ಜನತೆ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರಮುಖ ಖಾತೆ ನೀಡಿ ಸಚಿವರನ್ನಾಗಿ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮಾತನಾಡಿ  ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು.ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು.ಜಿಲ್ಲೆಯ ಜನ ಕಾಂಗ್ರೆಸ್ ಗೆ ಬೆಂಬಲ‌ನೀಡಿ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಕೈಗೊಂಡ ಜನಪರ ಕಾರ್ಯಕ್ರಮಗಳಾದ ಪ್ರಜಾಧ್ವನಿ,ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತಮಹೋತ್ಸವ, ಗ್ಯಾರಂಟಿ ಕಾರ್ಡ್ ನಂತಹ ಜನಮೆಚ್ಚುವ ಕಾರ್ಯಕ್ರಮಗಳಿಂದ ಜನಮನ ಗೆದ್ದಿದೆ.  ಎಸ್ ಎಸ್ ಎಂ ಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ, ಡಿಸಿಎಂ  ಡಿ.ಕೆ ಶಿವಕುಮಾರ್ ಹಾಗೂ ಹೈಕಮಾಂಡ್ ಗೆ ಮನವಿ ಮಾಡಿದರು.ಎಸ್ ಎಸ್ ಎಂಗೆ  ವೈದ್ಯಕೀಯ ಶಿಕ್ಷಣ, ನಗರಾಭಿವೃದ್ಧಿ ಖಾತೆ ಅಥವಾ ಸಮಾಜ ಕಲ್ಯಾಣ ಖಾತೆ ಸೇರಿದಂತೆ ಯಾವ ಖಾತೆ ನೀಡಿದರು ಅವರಿಗೆ ನಿಭಾಯಿಸುವ ಶಕ್ತಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎ.ನಾಗರಾಜ್,ಆಯೂಬ್ ಪೈಲ್ವಾನ್,ಮುದೇಗೌಡ್ರು ಗಿರೀಶ್,ಅಬ್ದುಲ್ ಲತೀಫ್,ಎಸ್ ಮಲ್ಲಿಕಾರ್ಜುನ್, ಶಾಮನೂರು ಟಿ ಬಸವರಾಜ್ ಉಪಸ್ಥಿತರಿದ್ದರು.