ಶಾಸಕ ಎಂ.ಸಿ.ಮನಗೂಳಿ ಬೇಗ ಗುಣಮುಖರಾಗಲಿ

ಆಲಮೇಲ:ಜ.13:ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಉಸಿರಾಟದ ತೊಂದರೆ ಯನ್ನು ಅನುಭವಿಸುತ್ತಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಪಟ್ಟಣದ ಆರಾಧ್ಯೆ ದೇವರಾದ ಹಜರತ ಪೀರ ಗಾಲೀಬ ಸಾಹೇಬರ ದರ್ಗಾ ಸೇರಿದಂತೆ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ವಲಯ ಅಧ್ಯಕ್ಷ ಮುನ್ನಾ ತಾಂಬೋಳಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ, ಗುಂಡು ಕರೋಟೆ, ಅಪ್ಪುಗೌಡ ಪಾಟೀಲ್, ಚಂದು ಹಳೇಮನಿ, ಜೈಭೀಮ ನಾಯ್ಕೋಡಿ, ಪುಂಡಲೀಕ ದೊಡ್ಡಮನಿ, ಸಿರಾಜ್ ಬೆಣ್ಣಿಶಿರೂರ, ಬಶೀರ ತಾಂಬೋಳಿ, ಗಾಲೀಬ ಸೌದಾಗರ, ಸಂಜು ಬೋಗೋಂಡಿ, ನಾಶೀರ ದೇವರಮನಿ, ಭೀಮು ಬಜಾರ, ಮುದಕಪ್ಪ ಜಮಾದಾರ, ದುಂಡು ಲೋಣಿ, ಸಾಧೀಕ ಗೌಂಡಿ,ನಬಿ ಜಮಾದಾರ, ನಿಜಾಮ್ ಮೇಲಿನಮನಿ, ಯಾಶೀನ್ ಶೇಖ, ಆಶೀಫ್ ಚೌಧರಿ, ರಾಜು ಮೇತ್ರಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರಿದ್ದರು.