ಶಾಸಕ ಎಂ.ಸಿ.ಮನಗೂಳಿ ಆರೋಗ್ಯದಲ್ಲಿ ಚೇತರಿಕೆ

ಸಿಂದಗಿ;ಜ.12: ಕಳೇದ ಒಂದು ವಾರದಿಂದ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿಯವರಿಗೆ ತೀವ್ರತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನಗೂಳಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ ವಿಜಯಪುರದ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಈ ವಿಷಯ ತಿಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಒತ್ತಡದ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಹಾಸ್ಪಿಟಲ್‍ಗೆ ದಾಖಲಿಸಲಾಗಿದೆ ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಪುರಸಭೆ ಅಧ್ಯಕ್ಷ ಹಾಗೂ ಅವರ ಸುಪುತ್ರ ಡಾ. ಶಾಂತವೀರ ಮನಗೂಳಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಮಾದ್ಯಮದವರೊಂದಿಗೆ ಮಾತನಾಡಿ, ಕಳೇದ ಎರಡು ದಿನಗಳ ಹಿಂದೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಏರ್‍ಅಂಬುಲನ್ಸ ವಿಶೇಷ ವಿಮಾನದ ಮುಖಾಂತರ ಬೆಂಗಳೂರು ಅಪೋಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲ್ಲದೆ ಅವರು ಬೇಗ ಗುಣಮುಖರಾಗುತ್ತಾರೆ ಎನ್ನುವ ಅಪೋಲಾ ಆಸ್ಪತ್ರೆಯ ಡಾ ಜಗದೀಶ ಅವರು ತಿಳಿಸಿದ್ದಾರೆ ಸವಿನ:ಹ ಚೈನೈ ಆಸ್ಪತ್ರೆ ದಾಖಲಿಸಿದ್ದಾರೆ ಎನ್ನುವ ವದಂತಿ ಶುದ್ಧ ಸುಳ್ಳು ಇಂತಹ ಯಾವುದೇ ಊಹಾಪೋಹಾ ಸುದ್ದಿಗಳಿಗೆ ಕ್ಷೇತ್ರದ ಜನತೆ ಹಾಗೂ ಮನಗೂಳಿ ಅವರ ಅಭಿಮಾನಿಗಳು ಆತಂಕ್ಕೊಳಗಾಗಬಾರದು ಅವರು ಬೇಗ ಗುಣಮುಖರಾಗಿ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸಿ ಮನವಿ ಮಾಡಿಕೊಂಡಿದ್ದಾರೆ.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಮಾತನಾಡಿ, ಇಡೀ ರಾಜ್ಯದ ಜನತೆ ಕೋವಿಡ್-19 ಸೊಂಕಿನಿಂದ ಭಯಭೀತರಾಗಿ ಮನೆಯಲ್ಲಿ ಕುಳಿತರೇ ಲಾಕ್ಡೌನ್ ಸಂದರ್ಭದಲ್ಲೂ ಅವರು ಕ್ಷೇತ್ರದ ಅನೇಕ ಗ್ರಾಮಗಳಿಗೆ ಸುತ್ತಾಡಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿ ದಿನಸಿ ವಸ್ತುಗಳನ್ನು ನೀಡಿ ದೈರ್ಯ ತುಂಬಿ ಸಾಂತ್ವನ ಹೇಳಿದವರು ಅಂತಹ ಸಂದರ್ಭದಲ್ಲೇ ಕೇಂದ್ರ ಸಚಿವ ಸುರೇಶ ಅಂಗಡಿಯವರಿಗೆ ಕೊವಿಡ್ ಸೊಂಕಿಗೆ ದೇಹ ಬಿಟ್ಟು ಹೋದರು ಆದರೆ ಇವರು ಇಳಿವಯಸ್ಸಿನಲ್ಲಿಯೂ ಅಂತಹ ಗಟ್ಟಿತನ ಮೆರೆದಿದ್ದಾರೆ. ಅವರಿಗೆ ಚಳಿಗಾಲದಲ್ಲಿ ಸ್ವಲ್ಪ ಉಸಿರಾಟದ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು ಅಷ್ಟೇನು ಆತಂಕ ಪಡುವಂತ ಕಾಯಿಲೆಯೇನು ಅಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಈ ಸಮಸ್ಯೆಯಿಂದ ಚೇತರಿಸಿಕೊಂಡು ಬರುತ್ತಾರೆ. ಇದಕ್ಕೆ ಕ್ಷೇತ್ರದ ಜನತೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕುಮಾರ ದೇಸಾಯಿ ಅವರು ಮಾತನಾಡಿ, ಜೀವನದಲ್ಲಿ ಆರೋಗ್ಯ ಕೆಡುವುದು ಸಹಜ ಆದರೆ ಕೆಲ ವಿರೋಧಿಗಳಿಗೆ ಕೆಟ್ಟ ಸುದ್ದಿಯನ್ನು ಹಬ್ಬಿಸಿ ಮಜಾ ಊಡಾಯಿಸುವ ಮತಿಗೇಡಿಗಳಿಗೆ ಒಳ್ಳೆಯದನ್ನು ಮತ್ತು ಒಳ್ಳೆಯವರು ಕಂಡರೆ ಆಗುವುದಿಲ್ಲ ಅಂತವರನ್ನು ದೇವರು ಕೂಡಾ ಕ್ಷಮಿಸಲಾರ ಸಿಂದಗಿ ಮತಕ್ಷೇತ್ರದ ಜನತೆಗೆ ಮನಗೂಳಿ ಅವರು ಎಷ್ಟು ಗಟ್ಟಿಗರು ಎನ್ನುವುದು ಗೊತ್ತಿದೆ ಇಂತಹ ಊಹಾಪೋಹ ಸುದ್ದಿ ಎಬ್ಬಿಸುತ್ತಿರುವ ಜನರಿಗೆ ಅವರು ಆರಾಮವಾಗಿ ಬಂದನಂತರ ಉತ್ತರ ನೀಡುತ್ತಾರೆ. ಯಾರು ಆತಂಕ ಪಡುವ ಅವಶÀ್ಯಕತೆಯಿಲ್ಲ ಎಂದು ಮನವರಿಕೆ ಮಾಡಿದ್ದಾರೆ.